fbpx

ಕೇಸರಿ ತಿಲಕ, ಕೇಸರಿ ಬಟ್ಟೆ ಧರಿಸಿದ ಸನ್ಯಾಸಿಯನ್ನು ಹೀಯಾಳಿಸಿ, ಥಳಿಸಿ ಹತ್ಯೆಗೈದ ಮುಸ್ಲಿಂ ಭ’ಯೋತ್ಪಾದಕ

ಹಿಂದೂ ಬಹುಸಂಖ್ಯಾತ ಭಾರತದಲ್ಲಿಯೇ ಹಿಂದೂ ಸಾಧುಸಂತರ ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಫಾಲ್ಘರ್ ಹತ್ಯಾಕಾಂಡದ ಬಳಿಕ ದೇಶಾದ್ಯಂತ ಅನೇಕ ಸಾಧು ಸಂತರ ಹತ್ಯೆ ನಡೆದುಹೋಗಿದೆ. ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ಕೇಸರಿ ಬಟ್ಟೆ, ಕೇಸರಿ ಕುಂಕುಮ ತೊಟ್ಟ ಕಾರಣಕ್ಕೆ ಮುಸ್ಲಿಂ ಮತಾಂಧನೊಬ್ಬ ವೃದ್ಧ ಸಾಧುವನ್ನು ಥಳಿಸಿ ಹತ್ಯೆಗೈದಿದ್ದಾನೆ.

ಮೃತ ಸಾಧುವನ್ನು ಕಾಂತಿಪ್ರಸಾದ್ ಎಂದು ಗುರುತಿಸಲಾಗಿದ್ದು, ಮೀರತ್‌ನ ಶಿವದೇವಾಲಯವೊಂದರ ಉಸ್ತುವಾರಿಯಾಗಿದ್ದರು. ಮೀರತ್‌ನ ಅಮ್ದುಲ್ಲಾಪುರ ಪ್ರದೇಶದ ಮೊಹಲ್ಲಾ ಹಂದಿಯಾ ನಿವಾಸಿಯಾಗಿದ್ದ ಕಾಂತಿಪ್ರಸಾದರಿಗೆ 60 ವರ್ಷ ವಯಸ್ಸಾಗಿತ್ತು.


Continue Reading

ಪ್ರತಿದಿನ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಹೋಗುವ ಸಂದರ್ಭ ಮುಸ್ಲಿಂ ಜಿಹಾದಿ ಅನಾಸ್ ಖುರೇಷಿ ಎಂಬಾತ ಇವರ ಕೇಸರಿ ಬಟ್ಟೆ, ಕೇಸರಿ ತಿಲಕದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದ. ಆದರೆ ಕಾಂತಿಪ್ರಸಾದರು ಅದನ್ನು ಹೆಚ್ಚು ತಲೆಗೆ ತೆಗೊಳ್ಳದೆ ಆತನಲ್ಲಿ ಆ ರೀತಿ ಮಾತನಾಡದಂತೆ ಬುದ್ಧಿವಾದ ಹೇಳಿ ಮುಂದೆ ಹೋಗುತ್ತಿದ್ದರು.

ಇದನ್ನೂ ಓದಿ:  ಯುವಕ ಬೈಕ್ ವೀಲಿಂಗ್ ಮಾಡಿದ್ರೆ, ಯುವತಿ ಡ್ರಾಗರ್ ಹಿಡಿದು ಸಾಥ್ ಕೊಟ್ಲು! ವೈರಲ್ ವಿಡಿಯೋ ನೋಡಿ

ಆದರೆ ಸೋಮವಾರದಂದು ಸಾಧು ಕಾಂತಿಪ್ರಸಾದರನ್ನು ರಸ್ತೆ ಮಧ್ಯೆಯೇ ತಡೆದ ಜಿಹಾದಿ ಅನಾಸ್ ಖುರೇಷಿ ತೀವ್ರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಮಾತ್ರವಲ್ಲದೇ ಮನಸೋ ಇಚ್ಛೆ ಥಳಿಸಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಕಾಂತಿಪ್ರಸಾದ್‌ ಅವರು ಈ ಬಗ್ಗೆ ಖುರೇಷಿ ಮನೆಯವರಿಗೆ ದೂರು ಹೇಳಲು ಹೋಗಿದ್ದರು.

ಆದರೆ ಅವರನ್ನು ಬೆಂಬಿಡದ ಖುರೇಷಿ ಮತ್ತೆ ಕಾಂತಿಪ್ರಸಾದ್‌ರನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅದಾಗಲೇ ಕಾಂತಿ ಪ್ರಸಾದ್ ಮೃತಪಟ್ಟಿದ್ದರು. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಖುರೇಷಿ ವಿರುದ್ಧ ದೂರು ದಾಖಲಿಸಿ, ಆತನನ್ನು ಬಂಧಿಸಲಾಗಿದೆ.

Trending Short Videos

close

This will close in 26 seconds

error: Content is protected !!