fbpx

Please assign a menu to the primary menu location under menu

ಮತ್ತೊಬ್ಬ ಬಿಜೆಪಿ ನಾಯಕನನ್ನು ಅಪಹರಿಸಿದ ಇ’ಸ್ಲಾಮಿಕ್ ಉ’ಗ್ರರು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

ಜಮ್ಮು-ಕಾಶ್ಮೀರದ ಸೋಪೋರ್‌ನಿಂದ ಬಿಜೆಪಿ ನಾಯಕನನ್ನು ಇ’ಸ್ಲಾಮಿಕ್ ಉ’ಗ್ರರು ಅಪಹರಿಸಿದ್ದಾರೆ. ಸೊಪೋರ್‌ನ ಬಿಜೆಪಿ ನಾಯಕ ಮೆಹರಾಜುದ್ದೀನ್ ಮಲ್ಲಾನನ್ನು ಉ’ಗ್ರರು ಅಪಹರಿಸಿದ್ದು ಇದೀಗ ಇವರ ರಕ್ಷಣಾ ಕಾರ್ಯವನ್ನು ಜಮ್ಮು-ಕಾಶ್ಮೀರ ಪೋಲೀಸ್ ಇಲಾಖೆ ಹಾಗೂ ಭಾರತೀಯ ಸೇನೆ ಜಂಟಿಯಾಗಿ ನಡೆಸುತ್ತಿದೆ.

ಗೆಳೆಯನೊಂದಿಗೆ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ವಾಹನದ ಮೂಲಕ ಆಗಮಿಸಿದ ಉಗ್ರರು ಏಕಾಏಕೀ ದಾಳಿ ನಡೆಸಿ ಅಪಹರಿಸಿದ್ದಾರೆ. ಪೋಲೀಸರ ಪ್ರಕಾರ, ‘ಶಸ್ತ್ರಸ್ತ್ರಾಗಳೊಂದಿಗೆ ಆಗಮಿಸಿದ ಉಗ್ರರು ಬಿಜೆಪಿ ನಾಯಕ ಮೆಹಾರಾಜುದ್ದೀನ್ ಮಲ್ಲಾನನ್ನು ಅಪಹರಿಸಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ’ ಎಂದಿದ್ದಾರೆ.

ಈ ವರ್ಷ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರೋ ಸೇನಾ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಗಳ ಮುಖ್ಯಸ್ಥರು ಹಾಗೂ ಉಗ್ರರನ್ನು ಸದೆಬಡಿಯಲಾಗಿದೆ. ಕಾಶ್ಮೀರ ಉಗ್ರರ ಕಪಿಮುಷ್ಟಿಯಿಂದ ಬಿಡುಗಡೆಯಾಗುತ್ತಿದ್ದಂತೆ ಇದೀಗ ಉಗ್ರರು ಸ್ಥಳೀಯ ಬಿಜೆಪಿ ನಾಯಕರು ಹಾಗೂ ಅಮಾಯಕರ ಹತ್ಯೆಗೈಯುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ಬಿಜೆಪಿ ಮುಖಂಡ ಹಾಗೂ ಅವರ ತಂದೆ ಮತ್ತು ಸಹೋದರನನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು. ಇದೀಗ ಮತ್ತೊಬ್ಬ ಬಿಜೆಪಿ ನಾಯಕನನ್ನು ಅಪಹರಿಸುವ ಮೂಲಕ ಕಣಿವೆ ರಾಜ್ಯದಲ್ಲಿ ದೇಶಪ್ರೇಮಿಗಳಲ್ಲಿ ಭಯದ ವಾತಾವರಣ ನಿರ್ಮಿಸಲು ಯತ್ನಿಸುತ್ತಿದ್ದಾರೆ.

Watch Video

error: Content is protected !!