fbpx

Please assign a menu to the primary menu location under menu

ಟ್ವಿಂಕಲ್-ಟ್ವಿಂಕಲ್ ಹಾಡಿಗೆ ಜ್ಯೂನಿಯರ್ ಯಶ್ ಸಖತ್ ಸ್ಟೆಪ್, ವೀಡಿಯೋ ವೈರಲ್

ಕರೋನಾದಿಂದ ಶೂಟಿಂಗ್ ಸ್ಥಗಿತಗೊಂಡು ಮನೆಯಲ್ಲೇ ದಿನಕಳೆಯುತ್ತಿರುವ ಸಿನಿಮಾ ತಾರೆಯರು, ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಫಾನ್ಸ್‌ಗಳಿಗೆ ಮನರಂಜನೆ ನೀಡುತ್ತಿದ್ದಾರೆ. ಕೆಜಿಎಫ್ ನಟ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಕೂಡ ತಮ್ಮ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ.

ತಮ್ಮ ಮಕ್ಕಳ ಜೊತೆಗಿನ ಪೋಟೋ, ವೀಡಿಯೋ ಹಂಚಿಕೊಳ್ಳುವ ಯಶ್ ಇದೀಗ ಪುತ್ರನ ಜೊತೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಜೂನಿಯರ್‌ ಯಶ್‌ಗೆ ಮನೆಯಲ್ಲಿ ಆಟವಾಡಲು ಒಂದು ಪುಟ್ಟ ಕೆಂಪು ಕಾರಿದ್ದು, ಟ್ಟಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡು ಪ್ಲೇ ಆದ ಕೂಡಲೇ ಸ್ಟೇರಿಂಗ್ ವೀಲ್ ಸಹಾಯ ಪಡೆದು, ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ

ಪುಟ್ಟ ಕಂದಮ್ಮನ ಎನರ್ಜಿ ನೋಡಿ ಯಶ್ ಫುಲ್ ಥ್ರಿಲ್ ಆಗಿದ್ದಾರೆ. ಅದರಲ್ಲಿಯೂ ಮಗನಿಗಿನ್ನೂ ನಿಲ್ಲಲೂ ಬರುವುದಿಲ್ಲ. ಆದರೆ, ಹಾಡಿಗೆ ಡ್ಯಾನ್ಸ್ ಮಾಡೋದ ನೋಡಿ ತಂದೆ ಯಶ್ ಫುಲ್ ಖುಷಿಯಾಗಿದ್ದಾರೆ. ಮಗ ಡ್ಯಾನ್ಸ್ ಮಾಡುವ ವೀಡಿಯೋ ರೆಕಾರ್ಡ್ ಮಾಡಿರುವ ಯಶ್ ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ವೀಡಿಯೋ,


A post shared by Yash (@thenameisyash) on

error: Content is protected !!