fbpx

ಬೇರೆ ಯುವತಿಯೊಂದಿಗೆ ತೆರಳುತ್ತಿದ್ದ ಪತಿಯ ಕಾರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಅಡ್ಡಗಟ್ಟಿದ ಮಹಿಳೆ, ವೀಡಿಯೋ ಸಖತ್ ವೈರಲ್

ಗೆಳತಿಯ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಪತಿಯನ್ನು ಹಿಂಬಾಲಿಸಿದ ಪತ್ನಿ ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ಪತಿಯನ್ನು ನಡುರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಜುಲೈ 11ರ ಸಂಜೆ ಮುಂಬೈನ ಪ್ರಮುಖ ರಸ್ತೆಯೊಂದರಲ್ಲಿ ಘಟನೆ ನಡೆದಿದ್ದು, ಪತಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನ ಹೊಂದಿದ್ದ ಪತ್ನಿ ನಡುರಸ್ತೆಯಲ್ಲೇ ರಂಪಾಟ ಮಾಡಿದ್ದಾಳೆ.

ಮಹಿಳೆಯ ಪತಿ ಕಪ್ಪು ಬಣ್ಣದ ಕಾರಿನಲ್ಲಿ ಬೇರೆ ಯುವತಿಯೊಂದಿಗೆ ಸಂಚರಿಸುತ್ತಿದ್ದ, ಇದರ ಬಗ್ಗೆ ಅರಿತ ಮಹಿಳೆ ಪತಿಯನ್ನು ಚೇಸ್ ಮಾಡಿ ವಾಹನ ಅಡ್ಡಗಟ್ಟಿದ್ದಾಳೆ. ವಾಹನದ ಬಾನೆಟ್ ಏರಿದ್ದಲ್ಲದೆ, ವಾಹನದಲ್ಲಿರುವ ಯುವತಿಯನ್ನು ಕೆಳಗಿಳಿಸುವಂತೆ ಕೂಗಾಟ ಮಾಡಿದ್ದಾಳೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವಾಹನದ ಒಳಗಿದ್ದ ಪತಿ ಹಾಗೂ ಯುವತಿ ಅದರಿಂದ ಕೆಳಗಿಯದ ಕಾರಣ ಕೋಪಗೊಂಡ ಮಹಿಳೆ ತನ್ನ ಚಪ್ಪಲಿ ತೆಗೆದು ವಾಹನದ ಮುಂಬಾಗದ ಗ್ಲಾಸ್‌ಗೆ ಭಾರಿಸಿದ್ದಾಳೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೋಲೀಸರು ಎಷ್ಟೇ ಕೇಳಿಕೊಂಡರೂ ಮಹಿಳೆ ತನ್ನ ರಂಪಾಟ ಮುಂದುವರಿಸಿದ್ದಾಳೆ.

ಮಹಿಳೆಯ ಪತಿ ಆಕೆಯನ್ನು ಕಾರಿನಲ್ಲಿ ಕೂರಿಸಿ ಸಮಾಧಾನ ಮಾಡಲು ಯತ್ನಿಸಿದ್ದಾನೆ, ಆದರೆ ಮಹಿಳೆ ಅಲ್ಲಿಯೂ ಕೂಗಾಟ ನಡೆಸಿದ್ದಾಳೆ. ಕೊನೆಗೆ ಹೇಗೋ ಸಮಾಧಾನಗೊಂಡ ಮಹಿಳೆಗೆ ಟ್ರಾಫಿಕ್ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ದಂಡ ವಿಧಿಸಿ ಸ್ಥಳದಿಂದ ಕಳುಹಿಸಿದ್ದಾರೆ. ವೈರಲ್ ವೀಡಿಯೋ ನೋಡಿ

Watch Video

error: Content is protected !!