fbpx

ಶಿವಾಜಿ ಮಹಾರಾಜರ ಬಗ್ಗೆ ಕಾಮಿಡಿ ಉಡಾಯಿಸಿದವನಿಗೆ ಭರ್ಜರಿ ಗೂಸ ನೀಡಿದ ಶಿವಭಕ್ತರು, ವೈರಲ್ ವೀಡಿಯೋ ನೋಡಿ

‘ಸ್ಟಾಂಡ್ ಅಪ್ ಕಾಮಿಡಿ’ ಹೆಸರಿನಲ್ಲಿ ಹಿಂದೂ ದೇವತೆಗಳು, ಹಿಂದೂಗಳ ಆಚಾರ ವಿಚಾರಗಳ ಅಪಮಾನ ಮಾಡುವ ಕಿಡಿಗೇಡಿಗಳು ಇದೀಗ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ್ದಾರೆ. ಅರ್ಥವಿಲ್ಲದ ಕಾಮಿಡಿಗಳ ಮೂಲಕ ಎದುರು ಕೂತ ಬಕ್ರಗಳನ್ನು ನಗಿಸುವ ಕಿಡಿಗೇಡಿಗಳು ಈಗೀಗ ಹಿಂದೂ ಧರ್ಮವನ್ನು ಅವಹೇಳನ ಮಾಡಲು ಶುರು ಹಚ್ಚಿಕೊಂಡಿದ್ದಾರೆ.

ಕಳೆದ ವಾರವಷ್ಟೇ ಸ್ಟಾಂಡ್ ಅಪ್ ಕಾಮಿಡಿಯನ್ ‘ಅಗ್ರಿಮಾ ಜೋಶುವಾ’ ಎಂಬಾಕೆ ಕಾಮಿಡಿ ಹೆಸರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ್ದಕ್ಕೆ ರೊಚ್ಚಿಗೆದ್ದ ಶಿವಭಕ್ತರು, ಕಾರ್ಯಕ್ರಮ ನಡೆಯುವ ‘ಹ್ಯಾಬಿಟಾಟ್ ಹೋಟೇಲ್’ಗೆ ನುಗ್ಗಿ ಅಲ್ಲಿದ್ದ ಸೆಟ್‌ಗಳನ್ನು ಧ್ವಂಸ ಮಾಡಿದ್ದರು.

ಘಟನೆಯಿಂದ ಬೆದರಿದ ‘ಅಗ್ರಿಮಾ ಜೋಶುವಾ’ ಕೊನೆಗೆ ಶಿವಭಕ್ತರಲ್ಲಿ ತನ್ನ ತಪ್ಪಿಗೆ ಕ್ಷಮಾಪಣೆಯನ್ನೂ ಕೋರಿದ್ದಳು. ಇದೀಗ ಶಿವಾಜಿ ಮಹಾರಾಜರ ಬಗ್ಗೆ ಹಾಸ್ಯ ಮಾಡಿದ ಮತ್ತೊಬ್ಬ ಸ್ಟಾಂಡ್ ಅಪ್ ಕಾಮಿಡಿಯನ್‌ಗೆ ಹಿಗ್ಗಾಮುಗ್ಗಾ ಭಾರಿಸಿದ ಬಗ್ಗೆ ವರದಿಯಾಗಿದೆ.

ಸ್ಟಾಂಡ್ ಅಪ್ ಕಾಮಿಡಿ ಹೆಸರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ ಸೌರಬ್ ಘೋಷ್ ಎಂಬಾತನಿಗೆ ಶಿವಭಕ್ತರು ಗೂಸಾ ನೀಡಿದ ವೀಡಿಯೋವೊಂದು ವೈರಲ್ ಆಗುತ್ತಿದೆ. ಶಿವಾಜಿ ಮಹಾರಾಜರ ಬಗ್ಗೆ ಅವಹೇಳನ ಮಾಡಿದ ಸೌರಬ್ ಘೋಷ್‌ಗೆ ಶಿವಭಕ್ತರು ಗೂಸಾ ನೀಡಿದ್ದಾರೆ ಎಂದು ಬರೆದು ವೈರಲ್ ಮಾಡಲಾಗುತ್ತಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!