fbpx

Please assign a menu to the primary menu location under menu

ಸ್ಟಂಟ್ ಮಾಡಬೇಡಿ ಎಂದ ಯುವಕನನ್ನು ಕೊ’ಚ್ಚಿ ಕೊಂ’ದ್ರು, ಬೆಚ್ಚಿಬೀಳಿಸುವ ವೀಡಿಯೋ ವೈರಲ್

ನಡುರಸ್ತೆಯಲ್ಲಿ ಬೈಕ್‌ ಸ್ಟಂಟ್‌ ಮಾಡುತ್ತಿದ್ದ ಯುವಕರಿಗೆ, ಸ್ಟಂಟ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬುದ್ಧಿವಾದ ಹೇಳಿದ ಯುವಕನ ಮೇಲೆ ಸ್ಟಂಟ್ ಮಾಡುತ್ತಿದ್ದ ಪುಡಾರಿಗಳು ಮಾರಣಾಂತಿಕ ಹಲ್ಲೆಗೈದು ಹತ್ಯೆ ಮಾಡಿದ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ.

ಪುಡಾರಿಗಳ ದಾಳಿಗೆ ಬಲಿಯಾದ ಯುವಕ ಖಾಸಗಿ ಕಾರು ಚಾಲಕನಾಗಿದ್ದು, ಮನೀಶ್(25) ಎಂದು ಗುರುತಿಸಲಾಗಿದೆ. ಈತನನ್ನು ಹತ್ಯೆಗೈದ ಮೂವರು ಬಾಲಕರು 16-17 ವರ್ಷದವರಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವಕನ ಮೇಲೆ ದಾಳಿ ನಡೆಯುತ್ತಿದ್ದರೆ, ಅದೇ ದಾರಿಯಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದರೂ ಯಾರೊಬ್ಬರೂ ಯುವಕನ ಸಹಾಯಕ್ಕೆ ಬಂದಿಲ್ಲ. ಈ ಮೂವರು ಅಪರಾಧಿಗಳು ಯುವಕನಿಗೆ ಥಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಆಧಾರದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಈ ಮೂವರನ್ನು ಬಂಧಿಸಿ ಬಾಲಾಪರಾಧ ಹತ್ಯೆ ಕೇಸು ದಾಖಲಿಸಲಾಗಿದೆ.

ಯುವಕರಿಂದ ಹತ್ಯೆಗೆ ಬಳಸಿದ ಸಾಧನಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎಂದು ಕ್ಯಾಲ ಪೊಲೀಸ್ ಠಾಣೆಯ ಉಪ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ. ಸದ್ಯ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ

Watch Video

error: Content is protected !!