fbpx

ಆನ್ಲೈನ್ ತರಗತಿಯಲ್ಲಿ ಎಲ್‌ಕೆಜಿ, ಯುಕೆಜಿಯ ಪುಟ್ಟ ಮಕ್ಕಳಿಗೆ ಪಾಕಿಸ್ತಾನದ ರಾಷ್ಟ್ರಗೀತೆ ಆಭ್ಯಾಸ ಮಾಡುವಂತೆ ಹೇಳಿದ ಮುಸ್ಲಿಂ ಶಿಕ್ಷಕಿ, ಘಟನೆ ನಡೆದಿದ್ದೆಲ್ಲಿ ಗೊತ್ತೇ?

ಆನ್ಲೈನ್ ಕ್ಲಾಸ್‌ನಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಪಾಕಿಸ್ತಾನ, ಬಾಂಗ್ಲಾದೇಶದ ರಾಷ್ಟ್ರಗೀತೆ ಕಲಿಯಲು ಹೇಳಿದ ಘಟನೆ ಜಾರ್ಖಂಡ್‌ನ ಜಮ್ಶೆಡ್‌ಪುರದ ಖಾಸಗೀ ಶಾಲೆಯೊಂದರಲ್ಲಿ ನಡೆದಿದೆ. ಸಂತ ನಂದಾಲಾಲ್ ಸ್ಮೃತಿ ವಿದ್ಯಾ ಮಂದಿರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್‌ಕೆಜಿ ಮತ್ತು ಯುಕೆಜಿ ಕಲಿಯುತ್ತಿರುವ ಮಕ್ಕಳಿಗೆ ಆನ್ಲೈನ್ ತರಗತಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಕಲಿಯುವಂತೆ ಶಾಲಾ ಶಿಕ್ಷಕಿ ಹೋಂ-ವರ್ಕ್ ಕೊಟ್ಟಿದ್ದಾರೆ.

ಕರೋನಾ ವೈರಸ್‌ ಮಾರಿಯಿಂದಾಗಿ ಅನೇಕ ಶಾಲೆಗಳು ಆನ್ಲೈನ್ ತರಗತಿಯ ಮೊರೆ ಹೋಗಿದೆ. ಆನ್ಲೈನ್‌‌ನಲ್ಲೇ ಮಕ್ಕಳಿಗೆ ತರಗತಿಗಳನ್ನು ನಡೆಸುವ ಮೂಲಕ ಪಾಠಗಳನ್ನು ಕಲಿಸಲಾಗುತ್ತಿದೆ. ಇದೇ ತರ ನಂದಾಲಾಲ್ ವಿದ್ಯಾ ಸಂಸ್ಥೆಯೂ ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದು, ತಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಾಟ್ಸಪ್ ಮೂಲಕ ಹೋಂ-ವರ್ಕ್ ಕಳಿಸಿ ಅಭ್ಯಾಸ ಮಾಡಿಸುತ್ತಿದ್ದಾರೆ.

ಎಲ್‌ಕೆಜಿ ಮತ್ತು ಯುಕೆಜಿಗೆ ಅಡ್ಮಿಷನ್ ಪಡೆದಿರುವ ಮಕ್ಕಳನ್ನು ಮೂರು ವಿಭಾಗಗಳನ್ನಾಗಿ ಮಾಡಲಾಗಿದ್ದು, ಅದರಲ್ಲಿ ಒಂದೊಂದು ವಿಭಾಗಕ್ಕೆ ಒಂದೊಂದು ದೇಶದ ರಾಷ್ಟ್ರಗೀತೆ ಅಭ್ಯಾಸ ಮಾಡುವಂತೆ ಶಿಕ್ಷಕಿ ಶೈಲಾ ಪರ್ವಿನ್ ಹೋಂ-ವರ್ಕ್ ಕಳುಹಿಸಿದ್ದಾಳೆ. ಅದರಲ್ಲಿ ಭಾರತದ ಜೊತೆ ಪಾಪಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯೂ ಸೇರಿದೆ.

ವಾಟ್ಸಪ್‌ನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆ ಕಲಿಸುವಂತೆ ಶಿಕ್ಷಕಿ ಶೈಲಾ ಪರ್ವಿನ್‌ಳಿಂದ ಸಂದೇಶ ಬಂದಿರೋದನ್ನ ಗಮನಿಸಿದ ಮಕ್ಕಳ ಹೆತ್ತವರು ಶಾಲೆಯ ವಿರುದ್ಧ ತಿರುಗಿ ಬಿದ್ದಿದ್ದು, ಶಾಲೆಯ ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಿದೆ.

error: Content is protected !!