fbpx

‘ಅಹ್ಮದಿ ಜಾತಿಯ ಮುಸ್ಲಿಂ’ ಮಗುವನ್ನು ತಮ್ಮ ಸ್ಮಶಾನದಲ್ಲಿ ಹೂತಿದ್ದಕ್ಕೆ ಹೆಣವನ್ನು ತೆಗೆದು ರಸ್ತೆಗೆಸೆದ ‘ಸುನ್ನಿ ಜಾತಿಯ ಮುಸ್ಲಿಮರು’, ವೀಡಿಯೋ ವೈರಲ್

ಜಾತೀವಾದ ಕೇವಲ ಹಿಂದೂ ಧರ್ಮದಲ್ಲಿ ಬೇರೂರಿದೆ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ದೊಡ್ಡ ತಪ್ಪು. ನಮ್ಮ ದೇಶದಲ್ಲಿ ಯಾವರೀತಿ ಹಿಂದೂಗಳ ನಡುವೆ ಜಾತಿಯ ಹೆಸರಲ್ಲಿ ಹಿಂಸಾಚಾರ ನಡೆಯುತ್ತೋ ಅದರ ಹತ್ತು ಪಟ್ಟು ಹಿಂಸಾಚಾರ ಬೇರೆ ದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂ, ಕ್ರಿಶ್ಚಿಯನ್ನರ ನಡುವೆ ನಡೆಯುತ್ತೆ.

ಹಿಂದೂಗಳಲ್ಲಿ ಹೇಗೆ ಹತ್ತಾರು ಜಾತಿಗಳು ಇವೆಯೋ ಅದೇ ರೀತಿ ಮುಸ್ಲಿಂ, ಕ್ರಿಶ್ಚಿಯನ್ನರಲ್ಲೂ ಹತ್ತಾರು ಜಾತಿ ಪದ್ದತಿಗಳು ಇವೆ. ಒಂದು ಜಾತಿಯ ಮಸೀದಿ, ಚರ್ಚ್‌ಗೆ ಇನ್ನೊಂದು ಜಾತಿಯವರಿಗೆ ಪ್ರವೇಶ ನಿರ್ಭಂದ ಇದೆ. ಒಂದು ಜಾತಿಯ ಸ್ಮಶಾನದಲ್ಲಿ ಇನ್ನೊಂದು ಜಾತಿಯ ಮೃತದೇಹ ಹೂಳೋ ಹಾಗಿಲ್ಲ.

ಇಂತಹದ್ದೇ ಘಟನೆ ಇದೀಗ ಮುಸ್ಲಿಂ ಬಹುಸಂಖ್ಯಾತ ದೇಶ ಬಾಂಗ್ಲಾದೇಶದಲ್ಲಿ ನಡೆದಿದೆ. ಅಹ್ಮದಿ ಮುಸ್ಲಿಂ ಜಾತಿಗೆ ಸೇರಿದ ಮಗುವಿನ ಮೃತದೇಹವನ್ನು ಸುನ್ನಿಗಳ ಸ್ಮಶಾನದಲ್ಲಿ ಹೂತಿದ್ದಕ್ಕೆ ಅದರ ಸಮಾಧಿಯನ್ನು ಅಗೆದು ತೆಗೆದು ಶವವನ್ನು ರಸ್ತೆಗೆಸೆದಿರುವ ಘಟನೆ ಢಾಕಾದ ಬ್ರಹ್ಮನ್‌ಬೇರಿಯಾದಲ್ಲಿ ನಡೆದಿದೆ.

ಸಮಯಕ್ಕೆ ಮೊದಲೇ ಹುಟ್ಟಿದ ಪುಟ್ಟ ಹೆಣ್ಣುಮಗು ಮೃತಪಟ್ಟಿದ್ದು, ಇದರ ಶವವನ್ನು ಸ್ಮಶಾನದಲ್ಲಿ ಹೂತ ಕೆಲವೇ ಗಂಟೆಗಳಲ್ಲಿ ಮತಾಂಧ ಸುನ್ನಿ ಮುಸ್ಲಿಮರು ಸಮಾಧಿಯಿಂದ ಹೊರತೆಗೆದು ರಸ್ತೆಯ ಪಕ್ಕದಲ್ಲಿ ಬಿಸಾಡಿದ್ದಾರೆ‌. ಈ ಸ್ಮಶಾನದಲ್ಲಿ ಹೆಚ್ಚಾಗಿ ಸುನ್ನಿಮುಸ್ಲಿಮರ ಶವಗಳನ್ನಷ್ಟೇ ಹೂಳಲಾಗಿದ್ದು, ಅಹ್ಮದೀ ಜಾತಿಗೆ ಸೇರಿದ ಮುಸ್ಲಿಮರ ಶವ ಹೂಳದಂತೆ ಫತ್ವಾ ಹೊರಡಿಸಲಾಗಿತ್ತು.

ಮುಸ್ಲಿಮರಲ್ಲಿ ಅಹ್ಮದೀ ಒಂದು ಜಾತಿಯಾಗಿದ್ದು, ಇವರ ಆಚರಣೆ ಭಿನ್ನವಾಗಿರೋದರಿಂದ ಇವರನ್ನು ಸುನ್ನಿಗಳು ಮುಸ್ಲಿಮರೆಂದು ಒಪ್ಪಿಕೊಳ್ಳೋದಿಲ್ಲ. ಇವರನ್ನು ಅನ್ಯ ಧರ್ಮದವರಂತೆ ಕಫೀರರು ಎಂದು ಸಂಭೋದಿಸಲಾಗುತ್ತೆ.

ಬ್ರಹ್ಮನ್‌ಬೇರಿಯಾ ಜಿಲ್ಲೆಯಲ್ಲಿ ಸುಮಾರು 25-30ಸಾವಿರ ಅಹ್ಮದೀ ಮುಸ್ಲಿಮರು ವಾಸಿಸುತ್ತಿದ್ದು, ಕಳೆದ ಜನವರಿಯಲ್ಲಿ ಅಹ್ಮದೀ ಮುಸ್ಲಿಮರಿಗೆ ಸೇರಿದ ಮಸೀದಿಯನ್ನು ಸುನ್ನಿ ಮುಸ್ಲಿಮರು ಹೊಡೆದುರುಳಿಸಿದ್ದರು. ಅಲ್ಲದೆ ಈ ಹಿಂದೆಯೂ ಹಲವು ಭಾರಿ ಅಹ್ಮದೀ ಮುಸ್ಲಿಮರ ಶವ ಸಂಸ್ಕಾರಕ್ಕೆ ಸುನ್ನಿ ಸ್ಮಶಾನಗಳಲ್ಲಿ ಅವಕಾಶ ನೀಡದ ಘಟನೆ ನಡೆದಿದೆ.

ಇದೀಗ ಪುಟ್ಟ ಮಗುವಿನ ಮೃತದೇಹ ಹೊರಗೆಸೆಯುವ ಮೂಲಕ ಸುನ್ನಿಗಳು ತಮ್ಮ ಮತಾಂಧತೆ ಹೊರಹಾಕಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿರುವ ಸ್ಥಳಿಯ ಆಹ್ಮದಿ ನಾಯಕ ಎಸ್‌ಎಂ‌ ಸೆಲಿಮ್, ‘ಕೆಲ ಮುಸ್ಲಿಂ ಮತಾಂಧರು ಮಗುವಿನ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದರು. ಮಗು ಮಾಡಿದ ತಪ್ಪೇನೆಂದರೆ ಅವಳು ಅಹ್ಮದಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದು’ ಎಂದು ತಿಳಿಸಿದ್ದಾರೆ.

ಚಾಪೆಯ ಮೇಲೆ ಬಿದ್ದಿರುವ ಮಗುವಿನ ಮೃತದೇಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ಮೃತದೇಹವನ್ನು ಊರ ಹೊರಭಾಗದ ಸ್ಮಶಾನದಲ್ಲಿ ಹೂತಿದ್ದಾರೆ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

Watch Video

error: Content is protected !!