ದಾರಿತಪ್ಪಿದ ನಾಯಿಯೊಂದು ಬಾಯಿ ಬರದಿದ್ದರೂ ತನ್ನ ಬುದ್ಧಿವಂತಿಕೆ ಉಪಯೋಗಿಸಿ ತನ್ನ ಮಾಲೀಕರ ಬಳಿ ಸೇರಿದ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದ. ಆಟವಾಡುತ್ತಾ ಹೊರಬಂದ ನಾಯಿ ಮನೆ ದಾರಿ ತಿಳಿಯದಾಗದೆ, ತನಗೆ ಮರಿ ಇದ್ದಾಗಿನಿಂದ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯರ ಕ್ಲಿನಿಕ್ಗೆ ತೆರಳಿ ಅವರ ನೆರವು ಪಡೆದು ಮನೆ ತಲುಪಿದೆ.
ಎಂದಿನಂತೆ ನಾಯಿ ಮಾಲಕಿ ನಾಯಿಯನ್ನು ಕರೆದುಕೊಂಡು ತನ್ನ ರೆಸ್ಟೋರೆಂಟ್ಗೆ ಹೋಗಿದ್ದು, ಅಲ್ಲಿಂದ ನಾಯಿ ಕಣ್ಮರೆಯಾಗಿತ್ತು. ಇತ್ತ ಆಟವಾಡುತ್ತಾ ಹೊರ ಬಂದ ನಾಯಿ ಮರಳಿ ಮಾಲಕಿಯ ಬಳಿಗೆ ಹೋಗಲಾಗದೆ ಒದ್ದಾಡುತ್ತಿತ್ತು. ಹೀಗೆ ರಸ್ತೆಯಲ್ಲಿ ಅಲೆಯುತ್ತಿದ್ದ ನಾಯಿಗೆ ತಕ್ಷಣ ಕಂಡಿದ್ದು ತನಗೆ ಚಿಕಿತ್ಸೆ ನೀಡುವ ಪಶು ವೈದ್ಯೆಯ ಹಾಸ್ಪಿಟಲ್.
ತಕ್ಷಣ ಆಸ್ಪತ್ರೆ ಬಳಿ ಓಡೋಡಿ ಬಂದ ನಾಯಿ ಅದರ ಬಾಗಿಲನ್ನು ಕೆರೆಯಲು ಶುರುಮಾಡಿದೆ. ಇದನ್ನು ನೋಡಿದ ವೈದ್ಯೆ ತಕ್ಷಣ ಬಾಗಿಲನ್ನು ತೆರೆದು ನಾಯಿಯನ್ನು ಆಸ್ಪತ್ರೆ ಒಳಗೆ ಬಿಟ್ಟಿದ್ದಾಳೆ. ತನಗೆ ಚಿಕಿತ್ಸೆ ನೀಡುವ ವೈದ್ಯೆಯನ್ನು ಗುರುತಿಸಿದ ನಾಯಿಯ ಖುಷಿಗೆ ಪಾರವೇ ಇರಲಿಲ್ಲ.
ನಂತರ ಪಶುವೈದ್ಯೆ ನಾಯಿಯ ಮಾಲಕಿಗೆ ಕರೆಮಾಡಿ ನಿಮ್ಮ ನಾಯಿ ನಮ್ಮ ಕ್ಲಿನಿಕ್ಗೆ ಬಂದಿದೆ ಎಂದು ತಿಳಿಸಿದ್ದಾಳೆ. ತಕ್ಷಣ ಆಸ್ಪತ್ರೆ ಬಳಿ ಧಾವಿಸಿದ ಮಾಲಕಿ ನಾಯಿಯನ್ನು ಕಂಡು ಖುಷಿಯಾಗಿದ್ದಾರೆ. ನಮ್ಮ ನಾಯಿ ಕೆಲದಿನಗಳಿಂದ ಕಾಣೆಯಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದೀಗ ನಾಯಿಯ ಬುದ್ದಿವಂತಿಕೆಯ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,