ಸದಾ ವಿವಾದಗಳಿಂದಲೇ ಸುದ್ದಿಯಾಗುವ ಎಂ.ಪಿ.ರೇಣುಕಾಚಾರ್ಯ ಇದೀಗ ಪ್ರಧಾನಿಯನ್ನೇ ಮಾತಿನಮಲ್ಲ ಎಂದು ಕರೆಯುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಕರೋನಾ ವಾರಿಯರ್ಗೆ ಬುದ್ಧಿ ಹೇಳುವ ಭರದಲ್ಲಿ ರೇಣುಕಾಚಾರ್ಯ ಪ್ರಧಾನಿಯನ್ನೇ ಟ್ರೋಲ್ ಮಾಡಿದ್ದಾರೆ.
ಹೊನ್ನಾಳಿಯ ಟಿ.ಬಿ. ರಸ್ತೆ, ಹೊಳೆಮಠ ಕಾಂಪೌಂಡ್ನಲ್ಲಿ ಕರೊನಾ ಸೋಂಕಿತರಿದ್ದ ಏರಿಯಾವನ್ನು ಸೀಲ್ಡೌನ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದರು. ಈ ವೇಳೆ ಕರೊನಾ ವಾರಿಯರ್ಸ್ ಒಬ್ಬರು ಕಟ್ಟಡಕ್ಕೆ ಸ್ಯಾನಿಟೈಸರ್ ಸಿಂಪಡಿಸುತ್ತಿದ್ದ ರೀತಿ ನೋಡಿ, ಬೇರೊಬ್ಬರನ್ನು ಸಿಂಪಡಿಸುವಂತೆ ಹೇಳಿದರು.
ಹೀಗೆ ಕರೋನಾ ವಾರಿಯರ್ ಜೊತೆ ಮಾತಿಗಿಳಿದ ರೇಣುಕಾಚಾರ್ಯ, ಪ್ರಧಾನಿಯಂತೆ ಇವನೊಬ್ಬ ಮಾತಿನ ಮಲ್ಲ ಎಂದರು. ಈತ ಪ್ರಧಾನಿಯಂತೆ ಭಾಷಣ ಮಾಡಲು ಆರಂಭಿಸಿದ್ದಾನೆ ಎಂದು ಕರೊನಾ ವಾರಿಯರ್ಗೆ ಛೇಡಿಸಿದರು.
ಹೀಗೆ ಬುದ್ಧಿ ಹೇಳುವ ಭರದಲ್ಲಿ ಪ್ರಧಾನಿ ಮಂತ್ರಿಯನ್ನೇ ರೇಣುಕಾಚಾರ್ಯ ಮಾತಿನ ಮಲ್ಲ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ವೈರಲ್ ವೀಡಿಯೋ ನೋಡಿ,