fbpx

Please assign a menu to the primary menu location under menu

ಬೆಳ್ಳಂಬೆಳಗ್ಗೆ ಭಾರತೀಯ ಸೇನೆಯ ಭರ್ಜರಿ ಭೇಟೆ, ಇಬ್ಬರು ಪಾಕಿಸ್ತಾನಿ ಇಸ್ಲಾಮಿಕ್ ಉಗ್ರರು ಮಟಾಶ್ (ವೀಡಿಯೋ)

ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ನಡೆದ ಎನ್ಕೌಂಟರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಕಾಶ್ಮೀರದ ನೌಗಮ್ ಸೆಕ್ಟರ್‌ನಲ್ಲಿ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಸೇನೆ ಸದೆಬಡಿದಿದೆ.

ಗಡಿರೇಖೆಯ ಬಳಿ ಅನುಮಾನಾಸ್ಪದ ಚಲನವಲನ ಯೋಧರ ಕಣ್ಣಿಗೆ ಬಿದ್ದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಪಾಕಿಸ್ತಾನಿ ಮೂಲದ ಇಬ್ಬರು ಉಗ್ರರನ್ನು ಎನ್ಕೌಂಟರ್ ಮಾಡಿದೆ. ಕಳೆದ ಕೆಲದಿನಗಳಿಂದ ಗಡಿರೇಖೆಯ ಬಳಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳಿಸಲು ಯತ್ನಿಸುತ್ತಿದೆ‌.

ನಿನ್ನೆಯಷ್ಟೇ ಪಾಕಿಸ್ತಾನದ ಶೆಲ್ ಧಾಳಿಗೆ ಭಾರತೀಯ ಯೋಧ ಹುತಾತ್ಮನಾಗಿದ್ದರು. ಇಂದು ಬೆಳ್ಳಂಬೆಳಗ್ಗೆ ಉಗ್ರರನ್ನು ಒಳನುಸುಳಿಸಲು ಯತ್ನಿಸಿದ್ದು, ಭಾರತೀಯ ಯೋಧರು ಉಗ್ರರನ್ನು ಹತ್ಯೆಗೈದಿದೆ.

ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇನ್ನಷ್ಟು ಉಗ್ರರು ಒಳನುಸುಳುವ ಸಾಧ್ಯತೆ ಇದ್ದು, ಭಾರತೀಯ ಯೋಧರು ಉಗ್ರರನ್ನು ಸದೆಬಡಿಯಲು ಸಿದ್ದರಾಗಿದ್ದಾರೆ.

Watch Video

error: Content is protected !!