fbpx

Please assign a menu to the primary menu location under menu

ತನ್ನ ಮೇಲೆ ಗರಂ ಆಗಿರೋ ಕನ್ನಡಾಭಿಮಾನಿಗಳಿಗೆ ನಯನಾ ಹೇಳಿದ್ದೇನು ನೋಡಿ, ವೈರಲ್ ವೀಡಿಯೋ

ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ನಟಿ ನಯನಾ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಇದೀಗ ಅದೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್ ನಯನಾರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿರೋದಲ್ಲದೆ, ಟ್ರೋಲ್‌ಗಳಿಗೂ ಆಹಾರವಾಗಿದ್ದಾರೆ.

ತಾನು ಹಂಚಿಕೊಂಡಿದ್ದ ಫೋಟೋವೊಂದಕ್ಕೆ ಇಂಗ್ಲಿಷಿನಲ್ಲಿ ಕ್ಯಾಪ್ಶನ್ ಬರೆದಿದ್ದಕ್ಕೆ ಅಭಿಮಾನಿಯೊಬ್ಬರು ಕನ್ನಡದಲ್ಲಿ ಕ್ಯಾಪ್ಷನ್ ಹಾಕುವಂತೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಆ ಕಮೆಂಟ್ಗೆ ತಿರುಗೇಟು ನೀಡಿದ್ದೇ ಇದೀಗ ನಯನಾಗೆ ಮುಳುವಾಗಿ ಪರಿಣಮಿಸಿದ್ದು, ಕನ್ನಡ ಪ್ರೇಮಿಗಳು ಫೇಸ್ಬುಕ್‌ನಲ್ಲಿ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.

ಇಂಗ್ಲಿಷ್ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತಿಯಾಗಿ ಅಭಿಮಾನಿಯೊಬ್ಬ, ‘ಫೇಮಸ್ ಆಗೋತನ ಕನ್ನಡ ಬೇಕು, ಆದಮೇಲೆ ಇಂಗ್ಲಿಷ್’ ಎಂದು ಪ್ರತಿಕ್ರಿಯೆ ನೀಡಿದ್ದ. ಅದಕ್ಕೆ ನಯನಾ ಅವರು ‘ಅಪ್ಪ ಕನ್ನಡದ ಭಕ್ತ, ಮುಚ್ಕೊಂಡು ನಿನ್ ಕೆಲ್ಸ ನೋಡ್ಕೊ’ ಎಂದು ತಿರುಗೇಟು ನೀಡಿದ್ದರು. ಅವರು ಹಾಗೆ ಉತ್ತರಿಸುತ್ತಿದ್ದಂತೆ ಸಾಕಷ್ಟು ಮಂದಿ ನಯನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಯನಾ ಅವರನ್ನು ಕನ್ನಡ ಕಾರ್ಯಕ್ರಮಗಳಿಂದ ಭಹಿಷ್ಕಾರ ಮಾಡಬೇಕು ಎಂಬ ಕೂಗೂ ಕೇಳಿಬಂದಿದೆ. ಹೀಗೆ ತನ್ನ ಮೇಲೆ ಕನ್ನಡ ಪ್ರೇಮಿಗಳ ಆಕ್ರೋಷ ಹೆಚ್ಚಾಗುತ್ತಿರೋದನ್ನು ಮನಗಂಡ ನಯನಾ ಇದೀಗ ತನ್ನ ಸಾಮಜಿಕ ಜಾಲತಾಣದ ಖಾತೆಯ ಮೂಲಕ ತನ್ನ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

ನಯನಾ ಅವರ ಫೇಸ್ಬುಕ್ ಪೋಸ್ಟ್:

ಎಲ್ಲರಿಗೂ ನಮಸ್ಕಾರ
ಈ ವೀಡಿಯೋ ಅಪ್ಪಟ ಕನ್ನಡ ಅಭಿಮಾನಿಗಳಿಗೆ…..

ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದರು ನಿನಗೆ ಕೊಬ್ಬು ದುರಂಕರ ಅಂತ ಅದನ್ನ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡು ಅವರುಗಳು ಕೂಡ ಕೆಟ್ಟ ಪದಬಳಕೆ ಮಾಡಿದ್ದರೂ,, ನಾನು ಯಾವುದೇ ಪೋಸ್ಟ್ ಹಾಕಿದರು ಕೂಡ ಆ ತರಹದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು ನಾನು ತುಂಬಾ ದಿನಗಳಿಂದ ಗಮನಿಸುತ್ತಾ ಇದ್ದೆ ,, ನನ್ನ ತಾಳ್ಮೆಗೂ ಮಿತಿಯಿದೆ ಅಲ್ಲವೆ ನಾನು ಆ ವ್ಯಕ್ತಿಗೆ ಅದನ್ನು ಹೇಳಿರುವುದೆ ವಿನಹ ಅವರು ಕನ್ನಡದ ಅಭಿಮಾನಿ ಎಂದು ಅಥವಾ ಕನ್ನಡ ಭಾಷೆ ಬಗ್ಗೆಯಾಗಲಿ ನಾನು ಮಾತನಾಡಲಿಲ್ಲ,, ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕೂಡ ಕನ್ನಡ ಭಾಷೆ ಕನ್ನಡದ ಅಭಿಮಾನಗಳ ಬಗ್ಗೆ ಕೀಳಾಗಿ ಮಾತನಾಡಿದವಳು ಅಲ್ಲಾ ,,ನಮ್ಮ ಕನ್ನಡವನ್ನು ಎಲ್ಲಾ ಕಡೆಯೂ ನಾವು ಬೆಳೆಸಬೇಕು ಅನ್ನೊ ಕೆಲಸ ಮಾಡಬೇಕೆ ಹೊರೆತು ವ್ಯಕ್ತಿಗೆ ಹೇಳಿದನ್ನ ಕನ್ನಡ ಭಾಷೆಗೆ ಹೇಳಿದೀನಿ ಎಂದು ಹೇಳುವುದು ತಪ್ಪಾಗಿ ಕಾಣಿಸುತ್ತೆ ..

ಆದರೆ ಕೆಲವರು ಕನ್ನಡ ಅಭಿಮಾನಿಗಳು ಎಂದು ಹೇಳಿ ಒಬ್ಬ ಹೆಣ್ಣಿಗೆ ಉಪಯೋಗಿಸಿರುವ ಪದಬಳಕೆ ಮೇಲೆ ಕೂಡ ಗಮನವಿರಲಿ ಅದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ .

ನಮಸ್ಕಾರಗಳೊಂದಿಗೆ
ನಯನಶರತ್

ವೀಡಿಯೋ ಇಲ್ಲಿದೆ ನೋಡಿ,

error: Content is protected !!