fbpx

Please assign a menu to the primary menu location under menu

‘ದುಬೆ ಕಾನ್ಪುರ ತಲುಪಲ್ಲ’, ವೈರಲ್ ಆಯ್ತು ಪೋಲೀಸರ ಸಂಭಾಷಣೆಯ ವೀಡಿಯೋ, ಇಲ್ಲಿದೆ ನೋಡಿ

ಎಂಟು ಪೋಲೀಸರನ್ನ ಹತ್ಯೆಗೈದ ಪಾತಕಿ ವಿಕಾಸ್ ದುಬೆ ಇಂದು ಮುಂಜಾನೆ ಪೋಲೀಸ್ ಎನ್ಕೌಂಟರ್‌ನಲ್ಲಿ ಹತನಾಗಿದ್ದಾನೆ. ಮಧ್ಯಪ್ರದೇಶದಿಂದ ಪಾತಕಿಯನ್ನು ಕಾನ್ಪುರಕ್ಕೆ ಕರೆತರುವ ವೇಳೆ ಪೋಲೀಸರ ವಾಹನ ಪಲ್ಟಿಯಾಗಿದ್ದು, ಈ ವೇಳೆ ವಿಕಾಸ್ ದುಬೆ ಪೋಲೀಸರ ರಿವಾಲ್ವರ್ ಕಸಿದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ನಡೆದ ಎನ್ಕೌಂಟರ್‌ನಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಆದರೆ ಇದೀಗ ಪೋಲೀಸರ ವಿಡಿಯೋ ರೆಕಾರ್ಡ್ ಒಂದು ವೈರಲ್ ಆಗಿದ್ದು, ದುಬೆ ಎನ್ಕೌಂಟರ್ ಪೂರ್ವ ನಿರ್ಧರಿತ ಎಂಬ ಅನುಮಾನಗಳು ದಟ್ಟವಾಗಲು ಕಾರಣವಾಗಿದೆ. ಪೋಲೀಸರ ನಡುವಿನ ಸಂಭಾಷಣೆಯ ವಿಡಿಯೋ ಇದಾಗಿದ್ದು, ದುಬೆ ಕಾನ್ಪುರ ತಲುಪಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಓರ್ವ ಪೊಲೀಸ್ ಅಧಿಕಾರಿ ವಿಕಾಸ್ ದುಬೆ ಯಾವ ಸಮಯಕ್ಕೆ ಕಾನ್ಪುರಕ್ಕೆ ಬರುತ್ತಾನೆ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಯೋರ್ವ, ವಿಕಾಸ್ ದುಬೆ ಕಾನ್ಪುರ ತಲುಪುವುದಿಲ್ಲ ಎಂದು ನಾನೂ ಭಾವಿಸುತ್ತೇನೆ ಎಂದು ನಗುತ್ತಾ ಹೇಳಿರುವುದು ಸ್ಪಷ್ಟವಾಗಿ ಕೇಳಬಹುದಾಗಿದೆ.

ಇಷ್ಟೇ ಅಲ್ಲದೆ ಮಾರ್ಗ ಮಧ್ಯೆ ವಿಕಾಸ್ ದುಬೆ ಇದ್ದ ಕಾರನ್ನು ಬದಲಾಯಿಸಲಾಗಿತ್ತು, ಪೋಲೀಸರು ಎನ್ಕೌಂಟರ್ ಮಾಡಲು ಪೂರ್ವ ತಯಾರಿ ನಡೆಸಿದ್ದರು ಎಂಬ ಆರೋಪಗಳಿದ್ದು, ಈ ಎಲ್ಲಾ ಕಾರಣಗಳಿಂದ ಇದು ಫೇಕ್ ಎನ್‍ಕೌಂಟರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಆದರೆ ಬಹುತೇಕ ಜನ ವಿಕಾಸ್ ದುಬೆ ಎನ್ಕೌಂಟರ್ ನಡೆಸಿದ ಪೋಲೀಸರನ್ನು ಶ್ಲಾಘಿಸಿದ್ದಾರೆ. ಪಾತಕ ಲೋಕದಲ್ಲಿ ಇಪ್ಪತ್ತು ವರ್ಷಗಳಿಂದ ಗುರುತಿಸಿಕೊಂಡಿರುವ ವಿಕಾಸ್ ದುಬೆಯ ಮೇಲೆ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳಿದ್ದರೂ, ಹಲವು ಬಾರಿ ಬಂಧನಕ್ಕೊಳಗಾಗಿದ್ದರೂ ಈ ದೇಶದ ದುರ್ಬಲ ಕಾನೂನಿನಿಂದಾಗಿ ಆತನಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗಿಲ್ಲ. ಆದರೆ ಪೋಲೀಸರು ಎನ್ಕೌಂಟರ್ ಮಾಡುವ ಮೂಲಕ ಆತನಿಗೆ ಸರಿಯಾದ ಶಿಕ್ಷೆ ನೀಡಿದ್ದಾರೆ ಎಂದಿದ್ದಾರೆ.

Watch Video

error: Content is protected !!