fbpx

ರಾಹುಲ್ ಗಾಂಧಿಗೆ ಹತ್ತು ವರ್ಷದಲ್ಲಿ ಸಾಧ್ಯವಾಗದ್ದನ್ನ, ಒಂದೇ ವರ್ಷದಲ್ಲಿ ಮಾಡಿ ತೋರಿಸಿದ ಸ್ಮೃತಿ ಇರಾನಿ, ಪೋಸ್ಟ್ ವೈರಲ್

ಮಾತೆತ್ತಿದರೆ ಸಾಕು ಬಡವರ ಬಗ್ಗೆ ಕಾಳಜಿಯ ಮಾತುಗಳನ್ನಾಡುವ, ದೇಶದ ಉದ್ದಾರ, ಅಭಿವೃದ್ದಿಯ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಸ್ಮೃತಿ ಇರಾನಿ ಮಾಡಿರುವ ಒಂದು ಟ್ವೀಟ್ ಇದೀಗ ಇರಿಸುಮುರಿಸು ಉಂಟು ಮಾಡಿದೆ. ಗಾಂಧಿ(ನಕಲಿ) ಕುಟುಂಬದ ತವರಿನಂತಿದ್ದ ಅಮೇಠಿ ಕ್ಷೇತ್ರ ಗಾಂಧಿಗಳ ಆಡಳಿತಾವಧಿಯಲ್ಲಿ ಎಷ್ಟು ಉದ್ದಾರವಾಗಿತ್ತು ಎಂಬುದಕ್ಕೆ ಈ ಟ್ವೀಟ್ ಸಾಕ್ಷಿಯಾಗಿದೆ

ಸುಮಾರು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಆಡಳಿತ ನಡೆಸಿದೆ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಘಟಾನುಗಟಿ ನಾಯಕರು ಇಲ್ಲಿ ಸಂಸದರಾಗಿ ಆಡಳಿತ ನಡೆಸಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರದಲ್ಲಿ 2009-2019ರ ವರೆಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ಇಲ್ಲಿನ ಅಭಿವೃದ್ದಿ ಶೂನ್ಯ.


Continue Reading

ಬಡವರ ಉದ್ಧಾರ ಮಾಡ್ತೇವೆ ಎಂದು ಅಧಿಕಾರ ನಡೆಸಿದರೆ ಹೊರತು, ಇಲ್ಲಿ ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಗಾಂಧಿ ನಾಮದೇಯಗಳನ್ನು ನೋಡಿ ಮತಹಾಕುತ್ತಿದ್ದ ಇಲ್ಲಿನ ಜನ ಕೊನೆಗೂ ರೋಸಿ ಹೋಗಿ ಸ್ಮೃತಿ ಇರಾನಿಯವರನ್ನು ಗೆಲ್ಲಿಸಿದ್ದರು. ಇದೀಗ ಅಮೇಠಿಯಲ್ಲಿ ಅಭಿವೃದ್ದಿ ಕೆಲಸಗಳು ಭರಪೂರವಾಗಿ ನಡೆಯಲು ಶುರುವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ, ಅಮೇಠಿಯ ಗೌರಿ ಗಂಜ್ ರೈಲ್ವೆ ನಿಲ್ದಾಣದ ಹಳೆಯ ಚಿತ್ರ ಮತ್ತು ಅಭಿವೃದ್ಧಿ ಹೊಂದಿದ ಈಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಇದರ ಜತೆಗೆ ಸಚಿವ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯೆಲ್ ಅವರಿಗೆ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಂಡದ್ದಕ್ಕಾಗಿ ಧನ್ಯವಾದವನ್ನು ಅವರು ಸಮರ್ಪಿಸಿದ್ದಾರೆ

ಇದನ್ನೂ ಓದಿ:  ಸಿಂಹಗಳ ಗುಂಪಿನ ಜೊತೆ ಕಾದಾಡಿ ತನ್ನ ಕರುವನ್ನು ರಕ್ಷಿಸಿದ ಕಾಡೆಮ್ಮೆ! ವೈರಲ್ ವಿಡಿಯೋ ನೋಡಿ

ರಾಹುಲ್ ಗಾಂಧಿಗೆ ಹತ್ತು ವರ್ಷದಲ್ಲಿ ಸಾಧ್ಯವಾಗದ್ದನ್ನ, ಒಂದೇ ವರ್ಷದಲ್ಲಿ ಮಾಡಿ ತೋರಿಸಿದ ಸ್ಮೃತಿ ಇರಾನಿ, ಪೋಸ್ಟ್ ವೈರಲ್.

Watch Video

Trending Short Videos

close

This will close in 26 seconds

error: Content is protected !!