fbpx

Please assign a menu to the primary menu location under menu

ನಮ್ಮ ಬೇಕರಿಯ ಮೈಸೂರ್ ಪಾಕ್ ತಿಂದರೆ ಕರೋನಾ ಗುಣವಾಗುತ್ತೆ ಎಂದು ಜಾಹೀರಾತು ನೀಡಿದ ಮಾಲೀಕ, ಮುಂದೇನಾಯಿತು ಗೊತ್ತೇ?

ನಮ್ಮ ಅಂಗಡಿಯಲ್ಲಿ ಸಿಗುವ ಮೈಸೂರ್ ಪಾಕ್ ತಿಂದರೆ ಕೊರೋನಾ ಸೋಂಕು ಗುಣವಾಗುತ್ತೆ ಎಂದು ಜಾಹೀರಾತು ಪ್ರಚಾರ ಮಾಡಿದ ಬೇಕರಿ ಮಾಲೀಕ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಕೊಯಮತ್ತೂರಿನ ನಿವಾಸಿ ಎಂಟು ಬೇಕರಿಗಳ ಮಾಲೀಕ ಶ್ರೀರಾಮ್ ಎಂಬವರೇ ತಾವು ತಯಾರಿಸುವ ಮೈಸೂರ್ ಪಾಕ್ ತಿಂದರೆ ಕರೋನಾ ಗುಣವಾಗುತ್ತೆ ಎಂದು ಜಾಹೀರಾತು ನೀಡಿದವರು.

ಮೊದಲೇ ಕರೋನಾ ವೈರಸ್ ಹಾಟ್‌ಸ್ಪಾಟ್ ಆಗಿರುವ ತಮಿಳುನಾಡಿನಲ್ಲಿನ ಜನ ಇವರ ಜಾಹೀರಾತು ನೋಡಿದ್ದೇ ಮೈಸೂರು ಪಾಕ್ ಕೊಳ್ಳಲು ಇವರ ಅಂಗಡಿಗೆ ಮುಗಿಬಿದ್ದಿದ್ದರು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೆ ತಡ ಇವರು ತಯಾರಿಸುವ ಮೈಸೂರ್ ಪಾಕ್ ಗೆ ಭಾರೀ ಬೇಡಿಕೆ ಬಂದಿತ್ತು.

ನಾವು ಹರ್ಬಲ್ ವಸ್ತುಗಳನ್ನು ಬಳಸಿ ತಯಾರಿಸಿರುವ ಮೈಸೂರ್ ಪಾಕ್ ಕೊರೋನಾಗೆ ರಾಮಬಾಣ ಎಂದು ಅವರು ಪ್ರಚಾರ ಮಾಡಿದ್ದರು. ಅಲ್ಲದೆ ತಮ್ಮ ಅಂಗಡಿಯಿಂದ ಮೈಸೂರ್ ಪಾಕ್ ಕೊಂಡು ತಿಂದವರಿಗೆ ಕೊರೋನಾ ಗುಣವಾಗಿದೆ ಎಂದು ಅವರು ಹೇಳಿಕೊಂಡಿದ್ದರು. ನಿಮಗೆ ಹೊರಬಂದು ಮೈಸೂರ್ ಪಾಕ್ ಕೊಳ್ಳಲು ಕಷ್ಟವಾಗುವುದಾದರೇ, ಮನೆಯಲ್ಲೇ ಕೂತು ಆರ್ಡರ್ ಮಾಡಿ, ನಾವು ಹೋಂ ಡೆಲಿವರಿ ಮಾಡುತ್ತೇವೆ ಎಂದು ಜಾಹೀರಾತು ಪ್ರಸರ ಮಾಡಿದ್ದರು.

ನಾವು ತಯಾರಿಸುವ ಮೈಸೂರ್ ಪಾಕ್ನಿಂದ ಕೊರೋನಾ ವಾಸಿಯಾಗುವುದು ಖಚಿತ, ಹೀಗಾಗಿ ಈ ಮೈಸೂರ್ ಪಾಕ್ನ ಪೇಟೆಂಟ್ ಹಕ್ಕನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸುತ್ತೇವೆ ಎಂದು ಕೂಡ ಹೇಳಿಕೊಂಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಜಿಲ್ಲಾಡಳಿತ ಬೇಕರಿ ಮಾಲೀಕನಿಗೆ ನೋಟೀಸ್ ಜಾರಿ ಮಾಡಿದೆ. ಆರೋಗ್ಯಾಧಿಕಾರಿಗಳಿಂದ ಅನುಮತಿ ಪಡೆಯದೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಕ್ಕೆ ನೋಟಿಸ್ ನೀಡಿದೆ. ಆತ ಸ್ವೀಟ್ ತಯಾರಿಸುತ್ತಿದ್ದ ಸ್ಥಳ ಹಾಗೂ ಬೇಕರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

error: Content is protected !!