fbpx

Please assign a menu to the primary menu location under menu

ಎಂಟು ಪೋಲೀಸರ ಹ’ತ್ಯೆಗೈದ ಪಾತಕಿ ವಿಕಾಸ್ ದುಬೆ ಅರೆಸ್ಟ್, ಆತ ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ?

ಕುಖ್ಯಾತ ಪಾತಕಿ, ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯನ್ನು ಸೆರೆಹಿಡಿಯುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ತನ್ನ ಬಂಧನಕ್ಕೆ ಆಗಮಿಸಿದ್ದ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆಯನ್ನು ಉಜ್ಜಯಿನಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರದ ಮೂಲಗಳು ಗುರುವಾರ ಮಾಹಿತಿ ನೀಡಿವೆ.ಇಲ್ಲಿವರೆಗೆ ವಿಕಾಸ್ ದುಬೆಯ ನಾಲ್ಕಕ್ಕೂ ಹೆಚ್ಚು ಸಹಚರರು ಪೋಲೀಸರ ಎನ್ಕೌಂಟರ್‌ನಲ್ಲಿ ಹತರಾಗಿದ್ದಾರೆ. ಗುರುವಾರ ಬೆಳಿಗ್ಗೆಯಷ್ಟೇ ಎರಡು ಪ್ರತ್ಯೇಕ ಎನ್’ಕೌಂಟರ್ ನಲ್ಲಿ ಗ್ಯಾಂಗ್’ಸ್ಟರ್ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಪೋಲೀಸರು ಹೊಡೆದುರುಳಿಸಿದ್ದರು.ಈ ಎಲ್ಲಾ ಘಟನೆಗಳಿಂದ ಬೆದರಿದ ವಿಕಾಸ್ ದುಬೆ ತಾನು ಅಡಗಿಕೊಂಡಿದ್ದ ಬಿಲದಿಂದ ಹೊರಬಂದು ಪೋಲೀಸರ ಮುಂದೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಉಜ್ಜಯಿನಿಯಿಂದ ವಿಕಾಸ್ ದುಬೆಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆಂದು ವರದಿಗಳು ತಿಳಿಸಿವೆ

Watch Video

error: Content is protected !!