fbpx

ಟೆಂಟ್‌ಗಳ ಸಮೇತ ಲಡಾಖ್ ಗಡಿಯಿಂದ ಕಾಲ್ಕಿತ್ತ ಚೀನೀ ಸೇನೆ, ಇಲ್ಲಿದೆ ಡಿಟೈಲ್ಸ್ (ವೀಡಿಯೋ)

ಭಾರತ ಹಾಗೂ ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದು ೨೦ ಯೋಧರು ಮಡಿಯಲು ಕಾರಣವಾಗಿದ್ದ ಗಲ್ವಾನ್‌ನ ವಿವಾದಿತ ಭೂ ಪ್ರದೇಶದಿಂದ ಸಂಘರ್ಷ ಆರಂಭವಾದ ಇಷ್ಟು ದಿನಗಳಲ್ಲಿ ಮೊದಲ ಬಾರಿಗೆ

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಘರ್ಷಣೆಯಲ್ಲಿ ಭಾರತದ 20ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿ ಅವರ ಆತ್ಮ ಸ್ಥೈರ್ಯ ಹೆಚ್ಚಿಸಲು ಪ್ರಧಾನಿ ಮೋದಿಯವರು ಇತ್ತೀಚೆಗಷ್ಟೇ ಲೇಹ್‌ಗೆ ಭೇಟಿ ನೀಡಿದ್ದರು.

ಇಷ್ಟೇ ಅಲ್ಲದೆ ಲೇಹ್‌ನಲ್ಲಿ ಪ್ರಧಾನಿ ಮೋದಿಯವರು ಚೀನಾದ ಆಕ್ರಮಣಕಾರಿ ನೀತಿಯ ವಿರುದ್ಧ ಕಿಡಿಕಾರಿದ್ದರು. ಇದು ಚೀನಾಗೆ ಇರಿಸುಮುರಿಸು ಉಂಟು ಮಾಡಿತ್ತು. ಇದೀಗ ಚೀನಾ ಸೇನೆಯೂ ವಿವಾದಿತ ಭೂ ಪ್ರದೇಶದಿಂದ ಕಾಲ್ಕಿತ್ತಿದ್ದು ಸುಮಾರು 1-2 ಕಿ.ಮೀ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.

ಗಲ್ವಾನ್‌ ಕಣಿವೆಯಲ್ಲಿ ಸಂಘರ್ಷವಾದ ಬಳಿಕ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ಫಲದಾಯಕವಾಗಿದ್ದು ಚೀನಾ ಸೇನೆ ಹಾಗೂ ಭಾರತೀಯ ಸೇನೆ ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯುವುದಾಗಿ ಒಪ್ಪಿಕೊಂಡಿತ್ತು.

ಇದೀಗ ಚೀನಾ ಸೇನೆಯು 2ಕಿ.ಮೀ ಹಿಂದಕ್ಕೆ ಸರಿಯುವುದು ಮಾತ್ರವಲ್ಲದೇ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತನ್ನ ಟೆಂಟ್‌ಗಳನ್ನೂ ಕೂಡಾ ಸ್ಥಳಾಂತರ ಮಾಡಿದೆ.

Watch Video

error: Content is protected !!