fbpx

Please assign a menu to the primary menu location under menu

ಕರೋನಾ ಸಂಕಷ್ಟದ ಮಧ್ಯೆ ಮತಾಂತರ ಮಾಡಲು ಬಂದ ಕ್ರಿ’ಶ್ಚಿಯನ್ ಮಿಷನರಿಯನ್ನು ಬೆಂಗಳೂರಿಗರು ಹೇಗೆ ಓಡಿಸಿದ್ದಾರೆ ನೋಡಿ, ವೈರಲ್ ವೀಡಿಯೋ

ಇಲ್ಲಿವರೆಗೆ ಹಣ, ವಸ್ತುಗಳ ಆಮಿಷಗಳ ಮೂಲಕ, ರೋಗಗಳನ್ನು ಗುಣಪಡಿಸುವ ಪೊಳ್ಳು ನಾಟಕದ ಮೂಲಕ ಬಡ ಮುಗ್ದ ಜನರನ್ನು ದೇಶದಾದ್ಯಂತ ಮತಾಂತರ ಮಾಡುತ್ತಿದ್ದ ಕ್ರಿ’ಶ್ಚಿಯನ್ ಮಿಷನರಿಗಳು, ಇದೀಗ ಕರೋನಾ ಮಹಾಮಾರಿ ಗುಣಪಡಿಸುವ ಭರವಸೆ ನೀಡಿ ಜನರನ್ನು ಮೂಢರನ್ನಾಗಿಸುವ ದಂಧೆಗೆ ಇಳಿದಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಬಿಹಾರದಲ್ಲಿ ಕರೋನಾ ಗುಣಪಡಿಸುವ ನೆಪದಲ್ಲಿ ಮತಾಂತರ ಮಾಡಲು ಬಂದ ಮಿಷನರಿಗಳಿಗೆ ಜನರು ಹಿಗ್ಗಾಮುಗ್ಗ ಥಳಿಸಿ ಗ್ರಾಮದಿಂದ ಓಡಿಸಿದ್ದತು. ಇದೀಗ ಬೆಂಗಳೂರಿನಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.

ಕರೋನಾ ಕಾಟದಿಂದ ಬಳಲುತ್ತಿರುವ ಬೆಂಗಳೂರಿನಲ್ಲಿ ಮತಾಂತರ ಮಾಡಲು ಕರಪತ್ರಗಳೊಂದಿಗೆ ಆಗಮಿಸಿದ ಕ್ರಿಶ್ಚಿಯನ್ ಮಿಷನರಿಗಳನ್ನು ಪ್ರಜ್ಞಾವಂತ ಹಿಂದೂಗಳು ತಡೆದು ನಿಲ್ಲಿಸಿದ್ದು, ಚೆನ್ನಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂಗಸಂದ್ರದಲ್ಲಿ ಮನೆಮನೆಗೆ ತೆರಳಿ ಕರಪತ್ರ ಹಂಚುತ್ತಿದ್ದ ಮಿಷನರಿಗಳನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಂತೆ ಒಬ್ಬಾಕೆ ಓಡಿಹೋದರೆ ಇನ್ನೊಬ್ಬ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಆತನ ಕೈಯಲ್ಲಿದ್ದ ಕರಪತ್ರಗಳನ್ನು ವಶಪಡಿಸಿಕೊಂಡ ಸ್ಥಳೀಯರು ತೆರೆದು ನೋಡಿದಾಗ, ಅದರಲ್ಲಿ ಅನ್ಯಧರ್ಮದ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿತ್ತು ಎಂದು ತಿಳಿದುಬಂದಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಿಷನರಿಗಳ ಉಪಟಳ ಹೆಚ್ಚಾಗುತ್ತಿದೆ.

ಬೇರೆ ರಾಜ್ಯಗಳಿಂದ ಆಗಮಿಸಿರುವ ಮಿಷನರಿಗಳು ಸ್ಥಳೀಯ ಜನರನ್ನು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಸಿಂಗಸಂದ್ರದಲ್ಲಿ ಇದೇ ರೀತಿ ಮತಾಂತರ ಮಾಡಲು ಬಂದ ಮಿಷನರಿಗಳನ್ನು ಪ್ರಜ್ಞಾವಂತ ಹಿಂದೂಗಳು ಓಡಿಸಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

error: Content is protected !!