ಪಾಕಿಸ್ತಾನ ಹುಟ್ಟಿದ 70ವರ್ಷಗಳ ಬಳಿಕ ಇಸ್ಲಮಾಬಾದ್ನಲ್ಲಿ ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆಯನ್ನು ಕೆಡವುವ ಮೂಲಕ ಇ’ಸ್ಲಾಮಿಕ್ ಜಿಹಾದಿಗಳ ಮತಾಂಧತೆ ಜಗತ್ತಿನ ಮುಂದೆ ಅನಾವರಣವಾಗಿದೆ. ಮು’ಸ್ಲಿಂ ಯುವಕ ಆತನ ಸಂಗಡಿಗರ ಜೊತೆ ಹೊಸದಾಗಿ ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆಯನ್ನು ನೆಲಸಮಗೊಳಿಸಿ, ಅದರ ವೀಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸಲು ಅಲ್ಲಿನ ಹಿಂದೂಗಳು ಕಾಂಪೌಂಡ್ ಕಟ್ಟಿದ್ದರು. ಅದನ್ನು ಮಲಿಕ್ ಶಾನಿ ಆವಾನ್ ಎಂಬ ಯುವಕ ತನ್ನ ಸಂಗಡಿಗರ ಜೊತೆ ಸೇರಿ ಕೆಡವಿದ್ದಾನೆ. ಇದರ ವೀಡಿಯೋ ಮಾಡಿರುವ ಆತ, ಅಲ್ಹಾನನ್ನು ತೃಪ್ತಿಪಡಿಸಲು ಈ ಕಟ್ಟಡ ನೆಲಸಮ ಮಾಡಿದ್ದೇನೆ, ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾನೆ.
ಗೋಡೆಯನ್ನು ಕೆಡವಲು ನನಗೆ ನೆರವಾದ ಅಲ್ಹಾನಿಗೆ ಕೃತಜ್ಞತೆಗಳು ಎಂದೂ ಹೇಳಿದ್ದು, ಈ ಕೆಲಸ ಮಾಡಲು ತುಂಬಾ ಹೆಮ್ಮೆಯಾಗುತ್ತಿದೆ ಎಂದಿದ್ದಾನೆ. ತನ್ನ ಇತರ ಸ್ನೇಹಿತರ ಜತೆಗೂಡಿ ವಿಡಿಯೋ ಮಾಡಿಕೊಂಡು ತನ್ನ ಸಾಹಸವನ್ನು ಕೊಂಡಾಡಿದ್ದಾನೆ.
ಹಿಂದೂ ದೇವಾಲಯವನ್ನು ನೆಲಸಮ ಮಾಡಲು ತನಗೆ ಸಹಕಾರ ನೀಡಿರುವವರಿಗೆ ಈಗ ಕೃತಜ್ಞತೆ ಸಲ್ಲಿಸಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿ,