fbpx

ಮೃತ ಪೋಲೀಸರ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಬೆಚ್ಚಿಬಿದ್ದಿದ್ದೇಕೆ ಗೊತ್ತೇ? ವಿಕಾಸ್ ದುಬೆಯ ಕ್ರೌರ್ಯ ಬಯಲು

ಕುಖ್ಯಾತ ಪಾತಕಿ ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದ ಪೋಲೀಸರ ಮೇಲೆ ಆತನ ಸಹಚರರು ಗುಂಡಿನ ದಾಳಿ ನಡೆಸಿದ ಪರಿಣಾಮ ಎಂಟು ಪೋಲೀಸರು ಸಾ’ವನ್ನಪ್ಪಿದ್ದರು ಅಲ್ಲದೆ ಆರಕ್ಕೂ ಹೆಚ್ಚು ಪೋಲೀಸರು ಗಾಯಗೊಂಡಿದ್ದರು. ಇದೀಗ ಮೃತರಾದ ಪೋಲೀಸರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಪೋಲೀಸರ ಮೇಲೆ ದಾಳಿ ಮಾಡಿದ ವಿಕಾಸ್ ದುಬೆಯ 60ಕ್ಕೂ ಹೆಚ್ಚು ಸಹಚರರು ನಕ್ಸಲರ ರೀತಿ ಕ್ರೌ’ರ್ಯ ಮೆರೆದಿದ್ದಾರೆ ಎಂಬ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಸತ್ತ ಪೊಲೀಸರ ಶ’ವಗಳ ರುಂಡ-ಮುಂಡವನ್ನು ಕೊಡಲಿಯಿಂದ ಕಡಿದು ಹಾಕಿದ್ದಲ್ಲದೆ, ದೇಹವನ್ನು ಛಿದ್ರಗೊಳಿಸಿ ಕೆಂಪು ಉ’ಗ್ರರ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವಿಕಾಸ್ ದುಬೆಯ ಸಹಚರರು ಡಿಎಸ್ಪಿ ದರ್ಜೆಯ ಸರ್ಕಲ್ ಆಫೀಸರ್ ದೇವೇಂದ್ರ ಮಿಶ್ರಾ ಅವರ ತಲೆ ಮತ್ತು ಕಾಲ್ಬೆರಳುಗಳನ್ನು ಕೊಡಲಿಯಿಂದ ಕೊ’ಚ್ಚಿ ತುಂಡರಿಸಿದ್ದರೆ, ಗುಂ’ಡಿನ ಸುರಿಮಳೆಗೈದು ದೇಹವನ್ನು ಛಿ’ದ್ರಗೊಳಿಸಿದ್ದಾರೆ. ಸಬ್ಇನ್ಸ್ಪೆಕ್ಟರ್ ಒಬ್ಬರ ದೇಹಾದ್ಯಂತ ತೂತುಗಳು ಕಾಣುವಂತೆ ತುಂಬಾ ಹತ್ತಿರದಿಂದ ಗುಂ’ಡಿನ ಸುರಿಮಳೆಗೈಯಲಾಗಿದೆ. ಪೊಲೀಸರ ಬಳಿಯಿದ್ದ ಎಕೆ-47 ಅನ್ನು ಕಸಿದುಕೊಂಡು, ಅದರಿಂದಲೇ ಮನಬಂದಂತೆ ಗುಂಡು ಹಾರಿಸಿ ಪೊಲೀಸ್ ಪೇದೆಯನ್ನು ಹ’ತ್ಯೆ ಮಾಡಲಾಗಿದೆ.

ಮೃ’ತರಾದ ಎಂಟು ಪೋಲೀಸರ ಮರಣೋತ್ತರ ಪರೀಕ್ಷೆ ನಡೆಸುವಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ದಾಳಿಯಲ್ಲಿ ಮೃ’ತರಾದ ಸಬ್ಇನ್ಸ್ಪೆಕ್ಟರ್ ಅನೂಪ್ ಸಿಂಗ್ ಅವರ ದೇಹದಿಂದ 7 ಗುಂಡುಗಳನ್ನು ಹೊರತೆಗೆದರೆ, ಶಿವರಾಜ್ಪುರ ಸ್ಟೇಷನ್ ಆಫೀಸರ್ ಮಹೇಶ್ ಯಾದವ್ ಅವರ ಮುಖ, ಎದೆ ಮತ್ತು ಹೆಗಲಿನ ಭಾಗದ ತುಂಬೆಲ್ಲಾ ಗುಂ’ಡುಗಳಿದ್ದವು. ಪೇದೆ ಜಿತೇಂದ್ರ ಪಾಲ್ ದೇಹ ಎಕೆ-47 ಗುಂಡಿನ ದಾಳಿಯಲ್ಲಿ ಛಿದ್ರಛಿದ್ರವಾಗಿದ್ದರೆ, ಪೇದೆಗಳಾದ ರಾಹುಲ್, ಬಬ್ಲು ಮತ್ತು ಸುಲ್ತಾನ್ ಅವರು .315 ಬೋರ್ ರೈಫಲ್ನಿಂದ ಸಿಡಿದ ಗುಂಡುಗಳಿಗೆ ಬಲಿಯಾಗಿದ್ದಾರೆ. ಗುಂಡಿನ ದಾಳಿಯ ಜೊತೆಗೆ ಸತ್ತ ಪೋಲೀಸರ ಮೃ’ತದೇಹದ ಮೇಲೆ ಕೊಡಲಿಯಿಂದಲೂ ದಾಳಿ ನಡೆಸಲಾಗಿದೆ.

ಮೃ’ತರಾದ ಪೋಲೀಸರ ತಲೆ ಮತ್ತು ಭುಜಗಳ ಮೇಲೆ ಗಾಯಗಳು ಹೆಚ್ಚಾಗಿದ್ದು, ವಿಕಾಸ್ ದುಬೆ ಪೋಲೀಸರು ತನ್ನ ಬಂಧನಕ್ಕೆ ಬರುತ್ತಿರುವ ಸುಳಿವು ಸಿಗುತ್ತಿದ್ದಂತೆ ಮನೆಯ ಮಹಡಿಗಳ ಮೇಲೆ ಶಾರ್ಪ್ ಶೂಟರ್ ಸ್ನೈಪರ್‌ಗಳನ್ನು ನಿಯೋಜಿಸಿದ್ದ ಎಂದು ತಿಳಿದುಬಂದಿದೆ. ವಿಕಾಸ್ ದುಬೆಯ 60 ಮಂದಿ ಸಹಚರರು ಪೊಲೀಸರನ್ನು ಸುತ್ತುವರಿದು ದಾಳಿ ನಡೆಸಿದ ರೀತಿ ಕೆಂಪು ಉಗ್ರರ ದಾ’ಳಿಯ ಮಾದರಿಯನ್ನು ಹೋಲುತ್ತದೆ ಎಂದು ಪ್ರಕರಣದ ತನಿಖೆ ಮಾಡುತ್ತಿರುವವರು, ವಿಧಿವಿಜ್ಞಾನ ಪ್ರಯೋಗಾಲಯದವರು ಮತ್ತು ಎಸ್ಟಿಎಫ್ ತಂಡಗಳು ಹೇಳುತ್ತವೆ.

Watch Video

error: Content is protected !!