fbpx

ಸೇನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್‌ಗೆ ಭಾರತೀಯ ಸೇನಾಧಿಕಾರಿಗಳು ನೀಡಿದ ಪ್ರತ್ಯುತ್ತರ ಹೀಗಿದೆ

ಗಲ್ವಾನ್ ಕಣೆವೆಯಲ್ಲಿ ಜೂನ್ 15ರಂದು ಭಾರತ-ಚೀನೀ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿರುವ ಯೋಧರಿಗೆ ಲೇಹ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶುಕ್ರವಾರ ಪ್ರಧಾನಿ ಮೋದಿಯವರು ಲಡಾಖ್ ಸೇನಾ ನೆಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಯೋಧರು ದಾಖಲಾಗಿರುವ ಲೇಹ್ ನ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನೆಯ ಬಗ್ಗೆ ಠೀಕೆಗಳನ್ನು ಮಾಡುತ್ತಿದ್ದಾರೆ. ಇದೀಗ ಈ ಬಗ್ಗೆ ಭಾರತೀಯ ಸೇನೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಟೀಕೆ ದುರುದ್ದೇಶದಿಂದ ಕೂಡಿದ್ದು, ಇದು ಭಾರತ ಮಾತೆಯ ರಕ್ಷಣೆಗೆ ಪ್ರಾಣಕೊಡಲು ಸಿದ್ದರಿರುವ ವೀರಯೋಧರಿಗೆ ಮಾಡಿರುವ ಅಪಮಾನ ಎಂದಿದೆ. ಸೇನಾಪಡೆಯ ಯೋಧರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯವನ್ನು ಕೊಡಲಾಗುತ್ತಿದೆ, ಈ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ತಿಳಿಸಿದೆ.

ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಲೇಹ್ನ ಸಾರ್ವಜನಿಕ ಆಸ್ಪತ್ರೆ ಸಮುಚ್ಚಯದಲ್ಲಿ ತುರ್ತು ಅಗತ್ಯಗಳಿಗೆ ಸ್ಪಂದಿಸಲು 100 ಹಾಸಿಗೆ ಸಾಮರ್ಥ್ಯವನ್ನು ಹೊಸದಾಗಿ ವಿಸ್ತರಣೆ ಮಾಡಲಾಗಿದೆ. ಈ ಕಾರಣಕ್ಕೆ ಯೋಧರ ತರಬೇತಿಗಾಗಿ ಮೀಸಲಾಗಿರುವ ಆಡಿಯೋ-ವಿಡಿಯೋ ಹಾಲ್ ಅನ್ನು ತಾತ್ಕಾಲಿಕವಾಗಿ ಯೋಧರ ಚಿಕಿತ್ಸಾ ವಿಭಾಗವಾಗಿ ಮಾರ್ಪಡಿಸಲಾಗಿದೆ. ತನ್ಮೂಲಕ ಯೋಧರು ಕೋವಿಡ್-19 ಸೋಂಕಿಗೆ ತುತ್ತಾಗದಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಲೇಹ್ ಆಸ್ಪತ್ರೆಯಲ್ಲಿರುವ ಹುಳುಕುಗಳನ್ನು ಮುಚ್ಚಿಡಲು ಪರ್ಯಾಯ ವ್ಯವಸ್ಥೆ ಮಾಡಿ ಕಣ್ಣಿಗೆ ಮಣ್ಣೆರೆಚಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಇದು ದುರುದ್ದೇಶಪೂರಿತವಾದ, ಆಧಾರ ರಹಿತ ಆರೋಪ ಎಂದು ಸೇನಾಪಡೆ ಹೇಳಿದೆ.

ಗಲ್ವಾನ್ ಕಣಿವೆಯ ಘರ್ಷಣೆ ನಡೆದ ಬಳಿಕ ಲೇಹ್ಗೆ ಭೇಟಿ ನೀಡಿದ್ದ ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಾನೆ ಕೂಡ ಯೋಧರನ್ನು ಇಲ್ಲಿಯೇ ಭೇಟಿಯಾಗಿದ್ದರು. ಆಗ ವ್ಯಕ್ತವಾಗದಿದ್ದ ಅನುಮಾನಗಳು ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ಏಕೆ ಬಂದಿತು ಎಂದು ಪ್ರಶ್ನಿಸಿದ್ದಾರೆ.

Army statement

error: Content is protected !!