fbpx

ಪೋಲೀಸರ ಹತ್ಯೆಗೈದ ಪಾತಕಿಯ ಬಂಗಲೆಯನ್ನು ನೆಲಸಮ ಮಾಡಿದ ಯೋಗಿ ಸರ್ಕಾರ, ವೀಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ಪೋಲೀಸರು ಹಾಗೂ ರೌಡಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಎಂಟು ಪೋಲೀಸರು ಹುತಾತ್ಮರಾಗಿದ್ದರು. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೋಲೀಸರಿಗೆ ಬೇಕಾಗಿರುವ ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದ ಪೋಲೀಸರ ಮೇಲೆ ವಿಕಾಸ್ ದುಬೆಯ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದರು.

ಒಂದು ಕಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಕಾಸ್ ದುಬೆಯನ್ನು ಸೆರೆಹಿಡಿಯಲು ಅಥವಾ ಎನ್ಕೌಂಟರ್ ಮಾಡಲು ಪೋಲೀಸರು ಬಲೆ ಬೀಸಿದ್ದರೆ, ಇನ್ನೊಂದು ಕಡೆ ಕಾನ್ಪುರ ಜಿಲ್ಲಾಡಳಿತ ವಿಕಾಸ್ ದುಬೆಯ ಬಂಗಲೆಯನ್ನು ಧ್ವಂಸ ಮಾಡಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವಿಕಾಸ್ ದುಬೆಯ ಮೇಲೆ ಬಿಜೆಪಿ ರಾಜಕಾರಣೆ ಹತ್ಯೆ, ಹತ್ಯಾ ಯತ್ನ, ಕಳ್ಳತನ, ಜಾಗ ಒತ್ತುವರಿ ಸೇರಿ ಒಟ್ಟು 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಕಾಸ್ ದುಬೆಯ ಸುಳಿವು ನೀಡಿದವರಿಗೆ ಸರ್ಕಾರ 50,000₹ ಬಹುಮಾನ ಘೋಷಿಸಿದ್ದು, ಪೋಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಶನಿವಾರ ಬೆಳಗ್ಗೆ ಜೆಸಿಬಿಗಳೊಂದಿಗೆ ಬಂದ ಕಾನ್ಪುರ ಜಿಲ್ಲಾಡಳಿತ ಆತನ ಭವ್ಯ ಬಂಗಲೆಯನ್ನು ಹೊಡೆದುರುಳಿಸಿದೆ. ಹತ್ತಿರದಲ್ಲೇ ಇದ್ದ ಆತನ ಐಷಾರಾಮಿ ಕಾರುಗಳೂ ಮನೆಯ ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿದೆ. ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!