fbpx

ಲಡಾಖ್: ‘ಭಾರತ್ ಮಾತಾಕಿ ಜೈ’ ಎನ್ನುತ್ತಾ ಸೈನಿಕರೊಂದಿಗೆ ಹೆಜ್ಜೆ ಹಾಕಿದ ಪ್ರಧಾನಿ, ವೀಡಿಯೋ ವೈರಲ್

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಲಡಾಖ್‌ನ ಲೇಹ್ ಬಳಿಬಿರುವ ಸೈನಿಕರ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ‌. ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಡಾಖ್’ಗೆ ಭೇಟಿ ನೀಡಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಲಡಾಖ್’ನ ಲೆಹ್ ಜಿಲ್ಲೆಯ ನಿಮೂಗೆ ಭೇಟಿ ನೀಡಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಹಾಗೂ ಭೂಸೇನಾ ಮುಖ್ಯಸ್ಥ ಕೂಡ ಪ್ರಧಾನಿಯವರಿಗೆ ಸಾಥ್ ನೀಡಿದ್ದಾರೆ.

ಸೇನಾ ನೆಲೆಯಲ್ಲಿನ ಸೈನಿಕರೊಂದಿಗೆ ಉಭಯ ಕುಶಲೋಪಹರಿ ನಡೆಸಿದ ಪ್ರಧಾನಿ ಮೋದಿಯವರು, ‘ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ನಿಮ್ಮೊಂದಿಗೆ ಗಟ್ಟಿಯಾಗಿ ನಿಂತಿದೆ ಎಂದು ಭರವಸೆ ನೀಡುವ ಮೂಲಕ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:  ಸುಂದರ ಯುವಕ ಏಲಿಯನ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ? ವೈರಲ್ ವಿಡಿಯೋ ನೋಡಿ

ಇದೇ ಸಂದರ್ಭದಲ್ಲಿ ‘ಭಾರತ್ ಮಾತಾಕಿ ಜೈ’ ‘ವಂದೇ ಮಾತರಂ’ ಎನ್ನುತ್ತಾ ಯೋಧರೊಂದಿಗೆ ಹೆಜ್ಜೆಹಾಕಿದರು. ಇದೀಗ ಈ ವೀಡಿಯೋ ವೈರಲ್ ಆಗಿದೆ,

Watch Video

Trending Short Videos

error: Content is protected !!