fbpx

ಫೇಮಸ್ ಆಗಲು ದೇವರ ಮೂರ್ತಿಗೆ ಒದ್ದು ಟಿಕ್‌ಟಾಕ್ ಮಾಡಿದ ಭೂಪರು ಕಂಬಿ ಹಿಂದೆ (ವೈರಲ್ ವೀಡಿಯೋ)

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಕಾಲಿನಿಂದ ಒದ್ದು ಹಾನಿಗೊಳಿಸಿದ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಟಿಕ್‌‌‌ಟಾಕ್ ವೀಡಿಯೋಗಾಗಿ ಇಬ್ಬರು ಈ ಕುಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಆರೋಪಿಗಳಲ್ಲಿ ಒಬ್ಬಾತ ಸಿಗರೇಟ್ ಎಳೆಯುತ್ತಾ ದೇವತೆಗಳ ಮೂರ್ತಿಗಳ ಮೇಲೆ ಕಾಲಿನಿಂದ ಒದೆಯುವ ಪೋಸ್ ಕೊಡುತ್ತಿದ್ದರೆ, ಇನ್ನೊಬ್ಬ ಅದನ್ನು ಶೂಟ್ ಮಾಡಿದ್ದಾನೆ. ಇದನ್ನ ಟಿಕ್‌ಟಾಕ್ ಮೂಲಕ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಗಳ ವಿರುದ್ಧ ಪೋಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದು, ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತಾವು ಕುಡಿದ ಮತ್ತಿನಲ್ಲಿ ತಾವು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತನಿಖೆಯೆ ಸಂದರ್ಭದಲ್ಲಿ ಪೋಲೀಸರಿಗೆ ಬಾಯಿಬಿಟ್ಟಿದ್ದಾರೆ.

ಆರೋಪಿಗಳ ಕೃತ್ಯದ ಹಿಂದೆ ಯಾವುದಾದರೂ ಕೈವಾಡ ಇದೆಯೇ ಎಂದು ಪೋಲೀಸರು ತನಿಖೆ ನಡೆಸುತ್ತಿದ್ದು, ಮೇಲ್ನೋಟಕ್ಕೆ ಇದು ಟಿಕ್‌ಟಾಕ್ ನಲ್ಲಿ ಫೇಮಸ್ ಆಗುವ ಹುಚ್ಚಿಗೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Watch Video

error: Content is protected !!