ಕಳೆದ ವಾರ ಅನಂತ್ನಾಗ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮತ್ತು ಆರು ವರ್ಷದ ಬಾಲಕನನ್ನು ಕೊಂ’ದ ಭ’ಯೋತ್ಪಾದಕನನ್ನು ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಜಮ್ಮು ಕಾಶ್ಮೀರ ಇ’ಸ್ಲಾಮಿಕ್ ಸ್ಟೇ’ಟ್ ಉ’ಗ್ರ ಸಂಘಟನೆಗೆ ಸೇರಿದ ಉ’ಗ್ರನನ್ನು ಯೋಧರು ಹೊಡೆದುರುಳಿಸಿದ್ದಾರೆ. ಶ್ರೀನಗರದ ಹಜರತ್ಬಾಲ್ ದೇವಾಲಯದ ಸಮೀಪವಿರುವ ಮಾಲ್ಬಾಗ್ನಲ್ಲಿ ಗುರುವಾರ ತಡರಾತ್ರಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಜಹೀದ್ ದಾಸ್ ಎಂಬಾತನನ್ನು ಯೋಧರು ಹೊಡೆದುರುಳಿಸಿದ್ದಾರೆ.
ಕಳೆದ ವಾರ ಈತ ಹಾಗೂ ಈತನ ಸಹಚರರು ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ಪಿಎಫ್ ಯೋಧರ ಮೇಲೆ ಏಕಾಏಕಿ ದಾ’ಳಿ ನಡೆಸಿದ್ದರು. ಉಗ್ರರ ದಾ’ಳಿಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮತ್ತು ಅಪ್ರಾಪ್ತ ಬಾಲಕ ಮೃ’ತಪಟ್ಟಿದ್ದರು.
ಬಾಲಕ ತನ್ನ ತಂದೆಯೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲೇ ಉಗ್ರರು ದಾ’ಳಿ ನಡೆಸಿದ್ದು, ಉಗ್ರರು ಹಾರಿಸಿದ ಗುಂ’ಡು ತಗುಲಿ ಅಸುನೀಗಿದ್ದ. ಘಟನೆ ಅನಂತ್ನಾಗ್ನ ಬಿಜ್ಬೆಹರಾ ಪ್ರದೇಶದ ಪಾಡ್ಶಾಹಿ ಬಾಗ್ ಸೇತುವೆ ಬಳಿ ಈ ಘಟನೆ ನಡೆದಿತ್ತು. ದಾ’ಳಿಯ ನಂತರ ಭಯೋತ್ಪಾದಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಯೋಧರು ಇದೀಗ ಆತನನ್ನು ಗುಂಡಿಕ್ಕಿ ಹ’ತ್ಯೆ ಮಾಡಿದ್ದಾರೆ.