fbpx

ಚಿರತೆಯೊಂದಿಗೆ ಕಾದಾಡಿ ಮರಿಯನ್ನು ರಕ್ಷಿಸಿದ ತಾಯಿ ಶ್ವಾನ, ಬೀದಿನಾಯಿಗಳ‌ ಸಾಥ್

ಚಿರತೆಯೊಂದು ನಾಯಿ ಮರಿಯನ್ನು ಹೊತ್ತೊಯ್ಯುತ್ತಿದ್ದ ಸಂದರ್ಭ ಬೀದಿ ನಾಯಿಗಳ ಗುಂಪೊಂದು ಪುಟ್ಟ ನಾಯಿ ಮರಿಯನ್ನು ಚಿರತೆಯಿಂದ ರಕ್ಷಿಸಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಅರೆ ಕಾಲನಿಯ ಸಮೀಪ ಚಿರತೆಯೊಂದು ಪುಟ್ಟ ನಾಯಿ ಮರಿಯನ್ನು ಹಿಡಿದುಕೊಂಡಿತ್ತು, ಆದರೆ ಒಂದಷ್ಟು ಬೀದಿ ನಾಯಿಗಳು ಗುಂಪಾಗಿ ಆ ಚಿರತೆಯ ಮೇಲೆಯೇ ಧಾಳಿ ಮಾಡಿ ಹಿಮ್ಮಟ್ಟಿಸಿ ನಾಯಿ ಮರಿಯನ್ನು ರಕ್ಷಿಸಿವೆ.

ಈ ಭಾಗದಲ್ಲಿ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ಸತತವಾಗಿ ಧಾಳಿ ಮಾಡುತ್ತಿದೆ. ಈ ಹಿಂದೆಯೂ ಅನೇಕ ನಾಯಿಗಳು ಚಿರತೆ ಧಾಳಿಗೆ ಬಲಿಯಾಗಿವೆ. ಚಿರತೆಯ ಹಿಡಿತಕ್ಕೆ ಸಿಲುಕಿದ್ದ ನಾಯಿ ಮರಿಯ ಕುತ್ತಿಗೆ ಮತ್ತಿತರ ಕಡೆಗೆ ಗಾಯಗಳಾಗಿವೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಚಿರತೆಯಿಂದ ನಾಯಿ ಮರಿಯ ಜೀವವನ್ನು ಬೀದಿ ನಾಯಿಗಳು ಕಾಪಾಡಿದ ಬಳಿಕ, ಸ್ಥಳೀಯ ನಿವಾಸಿಯೋರ್ವರು ಅದನ್ನು ತೆಗೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ, ಅದರ ಗಾಯಗಳಿಗೆ ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ.

ಈಹಿಂದೆ ಇದೇ ರೀತಿ ಚಿರತೆ ನಾಯಿ ಮೇಲೆ ಧಾಳಿ ಮಾಡಲು ಬಂದಾಗ ನಾಯಿಗಳೇ ಚಿರತೆಯ ಮೇಲೆ ಧಾಳಿ ಮಾಡಿ ಕೊಂದು ಹಾಕಿತ್ತು, ಅದರ ವೀಡಿಯೋ ಇಲ್ಲಿದೆ ನೋಡಿ.

Watch Video

error: Content is protected !!