fbpx

Please assign a menu to the primary menu location under menu

ದಂಪತಿಗೆ 9ವರ್ಷದ ಬಳಿಕ ಹುಟ್ಟಿದ ಅವಳಿ ಕಂದಮ್ಮಗಳನ್ನು ಕೊಂದು ಹಾಕಿದ ಸಾಕುನಾಯಿಗಳು, ಬೆಚ್ಚಿಬೀಳಿಸುವ ಸುದ್ದಿ

ಕೆಲ ದಿನಗಳ ಹಿಂದಷ್ಟೇ ಹುಟ್ಟಿದ ಅವಳಿ ಹಸುಗೂಸುಗಳನ್ನು ಸಾಕು ನಾಯಿಯೇ ಕೊಂದು ಹಾಕಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಮನೆಯ ಸಾಕು ನಾಯಿಗಳೇ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಪುಟ್ಟ ಕಂದಮ್ಮಗಳನ್ನು ಕಾಲಿನಿಂದ ಪರಚಿ, ಗಾಯಗೊಳಿಸಿ ಸಾಯಿಸಿದ್ದಾವೆ.

ಲ್ಯಾಬ್ರಡರ್ ಮತ್ತು ಅಮೆರಿಕನ್ ಫಾಕ್ಸ್ಹುಂಡ್ ಥಳಿಯ ನಾಯಿಗಳು ಹಸುಗೂಸುಗಳನ್ನು ಹತ್ಯೆ ಮಾಡಿರೋದು. ಎಳೆಗೂಸುಗಳನ್ನು ಮನೆಯಲ್ಲಿ ಬಿಟ್ಟು ಪಕ್ಕದ ಮನೆಯವರೊಂದಿಗೆ ಮಾತನಾಡಲು ತಾಯಿ ತೆರಳಿದ್ದಾಗ ಎರಡು ನಾಯಿಗಳು ಸೇರಿ ಕೇವಲ 26 ದಿನಗಳ ಹಸುಗೂಸುಗಳನ್ನು ಪರಚಿ, ಗಾಯಗೊಳಿಸಿ ಕೊಂದಿವೆ.

ನಾಯಿಗಳು ದಾಳಿಯಿಡುತ್ತಿದ್ದಂತೆ ಪುಟ್ಟ ಕಂದಮ್ಮಗಳ ಅಳುವ ಶಬ್ಧ ಕೇಳಿ ತಾಯಿ ಎಲೈನ್ ನೋವೈಸ್ (29) ಓಡೋಡಿ ಬರುತ್ತಾಳೆ. ನಾಯಿಯಿಂದ ಮಕ್ಕಳನ್ನು ಕಾಪಾಡಿದರೂ ಮಕ್ಕಳನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗುವುದಿಲ್ಲ.

9 ವರ್ಷಗಳಿಂದ ಮಕ್ಕಳಾಗದೆ ಕೊರಗುತ್ತಿದ್ದ ದಂಪತಿಗೆ ಕೊನೆಗೂ ಅದೃಷ್ಟವೆಂಬತೆ ಅವಳಿ ಮಕ್ಕಳಾಗಿರುತ್ತದೆ. ಆದರೆ, ನಾಯಿಗಳು ಅವಳಿ ಸಹೋದರಿಯರನ್ನು ಎಳೆದಾಡಿ, ಹೊಟ್ಟೆಯ ಭಾಗಗಳಿಗೆ ಪರಚಿ ಗಾಯಗೊಳಿಸಿ ಬಿಡುತ್ತವೆ.

ವಿಷಯ ತಿಳಿದು ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ನರ್ಸ್ ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ಆದರೆ, ಒಂದು ಮಗು ಅದೇ ಸಂದರ್ಭದಲ್ಲಿ ಸಾವಿಗೀಡಾದರೆ, ಇನ್ನೊಂದು ಮಗು ಆಸ್ಪತ್ರೆಯಲ್ಲಿ ಮರಣ ಹೊಂದುತ್ತದೆ.

ಅವಳಿ ಮಕ್ಕಳು ಜನಿಸುವ ಮೊದಲು ದಂಪತಿ ನಾಯಿಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು, ಆದರೆ ಮಕ್ಕಳಾಗಿದ್ದೇ ತಡ ನಾಯಿಗಳ ಕಡೆ ಹೆಚ್ಚಿನ ಗಮನ ಕೊಡದಿರೋದೆ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಲು ಕಾರಣ ಎಂದು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬ್ರೆಜಿಲ್ ಪೋಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

error: Content is protected !!