fbpx

ಪತ್ನಿಯ ಜುಟ್ಟು ಹಿಡಿದು ಊರೆಲ್ಲಾ ಎಳೆದಾಡಿ ಅಮಾನುಷವಾಗಿ ಹಲ್ಲೆನಡೆಸಿದ ಪತಿ, ವೀಡಿಯೋ ವೈರಲ್

ಬಿಹಾರದಲ್ಲಿ ಮಹಿಳೆಯೊಬ್ಬರ ಮೇಲೆ ಪತಿಯೇ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಪತ್ನಿಯ ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದಾಡಿ ಥಳಿಸಿರುವ ವೀಡಿಯೋ ಇದಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯು ಬಿಹಾರದ ವೈಶಾಲಿ ಜಿಲ್ಲೆಯ ಹುಸೈನಾ ಖುರ್ದ್ ಗ್ರಾಮದಲ್ಲಿ ಜೂನ್ 24ರಂದು ನಡೆದಿದ್ದು, ಪತಿಯ ಎರಡನೇ ಮದುವೆಯನ್ನು ತಡೆದಿದ್ದಕ್ಕೆ ಆತ ಹಲ್ಲೆ ಮಡೆಸಿದ್ದಾನೆ ಎಂದು ತಿಳಿದುಬಂದಿದೆ. ಮೊದಲ ಪತ್ನಿಗೆ ತಿಳಿಯದಂತೆ ಭೂಪ ಜೂನ್ 25ರಂದು ಎರಡನೇ ಮದುವೆಯಾಗಲು ಹೊರಟಿದ್ದ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಆದರೆ ಈ ವಿಷಯ ಗೊತ್ತಾದ ಕೂಡಲೆ ಮೊದಲ ಪತ್ನಿ ಕೋಪಗೊಂಡು ಪತಿ ಮದುವೆಯಾಗ ಹೊರಟಿದ್ದ ಎರಡನೇ ಹುಡುಗಿಯ ಕಡೆಯವರಿಗೆ ಆತನಿಗೆ ಮದುವೆಯಾಗಿರುವ ವಿಷಯ ಮುಟ್ಟಿಸಿದ್ದಾಳೆ. ಈ ವಿಚಾರ ವಧುವಿನ ಮನೆಯವರಿಗೆ ತಿಳಿದು ಅವರು ಮದುವೆಯನ್ನು ರದ್ದು ಮಾಡುತ್ತಾರೆ.

ಮದುವೆ ರದ್ದುಗೊಳ್ಳುತ್ತಿದ್ದಂತೆ ಪತಿರಾಯ ಮೊದಲ ಪತ್ನಿಯನ್ನು ಆಕೆ ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಜುಟ್ಟು ಹಿಡಿದು ಊರೆಲ್ಲ ಎಳೆದಾಡಿ ಥಳಿಸುತ್ತಾನೆ. ಕೆಲ ಸ್ಥಳೀಯರೂ ಆತನಿಗೆ ಸಹಕಾರ ನೀಡಿ ಆಕೆಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕುತ್ತಾರೆ.

ಹಲ್ಲೆಗೊಳಗಾದ ಮಹಿಳೆಯನ್ನು ಮುಜಾಫರ್ ನಗರದವಳೆಂದು ಗುರುತಿಸಲಾಗಿದೆ. ಪತಿಯನ್ನು ಹೊರತು ಪಡಿಸಿ ಆತನಿಗೆ ಸಹಕರಿಸಿದ ಇತರರ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೀಡಿಯೋ ನೋಡಿ

Watch Video

error: Content is protected !!