ಮಾಸ್ಕ್ ಧರಿಸದೆ ಬಸ್ ಗೆ ಹತ್ತಿದ ಇಬ್ಬರು ಯುವಕರನ್ನು ಕಂಡಕ್ಟರ್ ಹಾಗೂ ಸಹಪ್ರಯಾಣಿಕರು ಸೇರಿ ಬಸ್ನಿಂದ ಕೆಳಗಿಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕುಂದಾಪುರದಿಂದ ಉಡುಪಿಗೆ ಸಾಗುವ ಖಾಸಗಿ ಬಸ್ಗೆ ಮಾಸ್ಕ್ ಧರಿಸದೇ ಹತ್ತಿದ ಇಬ್ಬರು ಪ್ರಯಾಣಿಕರಿಗೆ ಬಸ್ ಕಂಡಕ್ಟರ್ ಕೆಳಗಿಳಿಯುವಂತೆ ಹೇಳಿದ್ದಾರೆ.
ಕರೋನಾ ಸಂಕಷ್ಟದಿಂದ ಪಾರಾಗಲು ಹೊರಗೆ ಓಡಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಆದೇಶವಿದ್ದರೂ ಇಬ್ಬರು ಮುಸ್ಲಿಂ ಯುವಕರು ಮಾಸ್ಕ್ ಧರಿಸದೆ ಬಸ್ ಹತ್ತಿದ್ದಾರೆ. ಇದನ್ನು ಕಂಡ ಬಸ್ ನಿರ್ವಾಹಕ ಆಕ್ಷೇಪಿಸಿದ್ದು, ಆದರೆ ಇಬ್ಬರು ಪ್ರಯಾಣಿಕರು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಇದೇ ಸಂದರ್ಭದಲ್ಲಿ ಕಂಡಕ್ಟರ್ ಸಹಕಾರಕ್ಕೆ ಬಂದ ಸಹ ಪ್ರಯಾಣಿಕರು ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡು ಬಸ್ಸಿನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿ,