fbpx

17ಅಡಿ ಉದ್ದದ ಅನಾಕೊಂಡ ಹಾವಿನ ಜೊತೆ ಚೆಲ್ಲಾಟ, ವೀಡಿಯೋ ಸಖತ್ ವೈರಲ್

ಹಾವುಗಳಲ್ಲೇ ಅತೀ ಅಪಾಯಕಾರಿ ಎನಿಸಿರುವ ಅನಾಕೊಂಡ ಹಾವಿನ ಬಾಲ ಹಿಡಿದು ಚೆಲ್ಲಾಟವಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ನದಿಯ ನೀರಿನ ಮೇಲೆ ಬೋಟ್‌ನಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಭಾರೀ ಗಾತ್ರದ ಅನಾಕೊಂಡ ಹಾವಿನ ಬಾಲ ಹಿಡಿದು ಆಟವಾಡೋದು ಕಾಣಿಸುತ್ತದೆ.

ಈ ಘಟನೆ ನಡೆದಿರೋದು ಬ್ರೆಜಿಲ್ ದೇಶದ ಸಾಂತಾಮರಿಯ ನದಿಯಲ್ಲಿ. ಸುಮಾರು ಆರು ವರ್ಷಗಳ ಹಿಂದಿನ ವೀಡಿಯೋ ಇದಾಗಿದ್ದು, ಬೋಟಿಂಗ್ ಹೋಗಿದ್ದ ಕೆಲವರು ನೀರಿನಲ್ಲಿ ಕಂಡ ಅನಾಕೊಂಡ ಹಾವಿನ ಜೊತೆ ಆಟವಾಡಿದ್ದಾರೆ. ಹಾವಿನ ಬಾಲ ಹಿಡಿದಿದ್ದರಿಂದ ಅದಕ್ಕೆ ನೀರಿನಲ್ಲಿ ಮುಂದಕ್ಕೆ ಚಲಿಸಲು ಸಾಧ್ಯವಾಗಿಲ್ಲ.

ಕೆಲ ನಿಮಿಷಗಳ ಕಾಲ ಆಟವಾಡಿಸಿ ನಂತರ ಅನಾಕೊಂಡ ಬಾಲವನ್ನು ಬಿಟ್ಟಿದ್ದಾರೆ. ವೀಡಿಯೋದಲ್ಲಿ ಕಾಣುವ ಹಾವಿನ ಉದ್ದ ಸುಮಾರು 17-18 ಅಡಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಈ ಗಾತ್ರದ ಅನಾಕೊಂಡಗಳು ಮನುಷ್ಯನನ್ನು, ಪ್ರಾಣಿಗಳನ್ನು ಪೂರ್ತಿಯಾಗಿ ನುಂಗಬಲ್ಲದು. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!