fbpx

Please assign a menu to the primary menu location under menu

ಚೀನಾದ ಮಾರ್ಷಲ್ ಆರ್ಟ್ಸ್‌ ಫೈಟರ್ಸ್ ಗೆ ಮಣ್ಣು ಮುಕ್ಕಿಸಲು ಸಿದ್ದವಾಗಿದೆ ಭಾರತದ ಘಾತಕ ಕಮಾಂಡೋ ಪಡೆ, ವೀಡಿಯೋ ನೋಡಿ

ಗಡಿಯಲ್ಲಿ ಪದೇ ಪದೇ ತಂಟೆ ಮಾಡುವ ಚೀನಾ ಕೆಲದಿನಗಳ ಹಿಂದಷ್ಟೇ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಘ’ರ್ಷಣೆ ನಡೆಸಿತ್ತು. ಈ ಘ’ರ್ಷಣೆಯಲ್ಲಿ ಭಾರತದ 20ಯೋಧರು ಹುತಾತ್ಮರಾಗಿದ್ದರೆ, ಚೀನಾದ 35ಕ್ಕೂ ಹೆಚ್ಚು ಸೈನಿಕರನ್ನು ಹೊ’ಡೆದುರುಳಿಸಲಾಗಿತ್ತು. ಇದೀಗ ಈ ಘರ್ಷಣೆಗೆ ಸಂಬಂಧಿಸಿದಂತೆ ಸ್ಪೋ’ಟಕ ಮಾಹಿತಿ ಹೊರಬಿದ್ದಿದೆ.

ಭಾರತದೊಂದಿಗೆ ಘ’ರ್ಷಣೆಗೆ ಚೀನಾ ಮೊದಲೇ ಸಿದ್ಧವಾಗಿತ್ತು ಎನ್ನುವುದಕ್ಕೆ ಇದೀಗ ಸಾಕ್ಷಿ ಲಭಿಸಿದ್ದು, ಘರ್ಷಣೆ ಸಂಭವಿಸುವ ಮೊದಲೇ ಚೀನಾ ಸರ್ಕಾರ ಪರ್ವತಾರೋಹಿಗಳು ಹಾಗೂ ಮಾರ್ಷಲ್ ಆರ್ಟ್ಸ್ ಪೈಟರ್ ಗಳನ್ನು ಗಡಿಗೆ ಕಳುಹಿಸಿತ್ತು ಎಂದು ಚೀನಾ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ.

ಪತ್ರಿಕೆ ವರದಿ ಪ್ರಕಾರ ಘರ್ಷಣೆಗೂ ಮುನ್ನ ಮೌಂಟ್‌ ಎವರೆಸ್ಟ್‌ ಒಲಿಂಪಿಕ್‌ ಜ್ಯೋತಿ ರಿಲೇ ತಂಡ ಹಾಗೂ ಮಾರ್ಷಲ್‌ ಆರ್ಟ್ಸ್ ಕ್ಲಬ್‌ ಸೇರಿದಂತೆ 5 ಹೊಸ ಮಿಲಿಟರಿ ವಿಭಾಗಗಳು ಲಾಸಾದಲ್ಲಿ ಹಾಜರಾಗಿದ್ದವು ಎಂದು ತಿಳಿದುಬಂದಿದೆ‌. ಇಷ್ಟೇ ಅಲ್ಲದೆ ಟಿಬೆಟ್‌ ರಾಜಧಾನಿಯಾಗಿರುವ ಲಾಸಾದಲ್ಲಿ ನೂರಾರು ಯೋಧರು ನಿಂತಿರುವುದನ್ನು ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಸಿಸಿಟೀವಿ ಪ್ರಸಾರ ಮಾಡಿದೆ‌‌.

ಭಾರತ-ಚೀನಾ ಯೋಧರ ನಡುವೆ ಘ’ರ್ಷಣೆ ನಡೆದ ಗಲ್ವಾನ್‌ ಕಣಿವೆ ಕಂದಕಗಳಿಂದ ಕೂಡಿರುವುದು ಹಾಗೂ ಗಡಿಯಲ್ಲಿ ಶ’ಸ್ತ್ರಾಸ್ತ್ರ ಬಳಸಬಾರದು ಎಂಬ ಒಪ್ಪಂದ ಇರುವ ಹಿನ್ನೆಲೆಯಲ್ಲಿ ಪರ್ವತಾರೋಹಿಗಳು ಮತ್ತು ಮಾರ್ಷಲ್‌ ಆರ್ಟ್ಸ್ ಪರಿಣಿತರನ್ನು ಚೀನಾ ಕರೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಚೀನಾದ ಮಾರ್ಷಲ್ ಆರ್ಟ್ಸ್ ಫೈಟರ್‌ಗಳಿಗೆ ಮಣ್ಣುಮುಕ್ಕಿಸಲು ಭಾರತ ತನ್ನ ಘಾತಕ ಕಮಾಂಡೋ ಪಡೆಯನ್ನು ಕಣೆವೆ ಪ್ರದೇಶದಲ್ಲಿ ಸಜ್ಜುಗೊಳಿಸಿದೆ ಎಂದು ತಿಳಿದುಬಂದಿದೆ.

ಚೀನೀ ಮಾರ್ಷಲ್ ಆರ್ಟ್ಸ್ ಫೈಟರ್‌ಗಳಿಗೆ ಠಕ್ಕರ್ ಕೊಡಲಿರುವ ಘಾತಕ್‌ ಕಮ್ಯಾಂಡೋಗಳು ಭಾರತೀಯ ಸೇನಾ ಪಡೆಯ ವಿಶೇಷ ವಿಭಾಗವಾಗಿದೆ. ಒಂದು ತಂಡದಲ್ಲಿ ಒಬ್ಬರು ಜೆಸಿಒ, ಒಬ್ಬರು ಅಧಿಕಾರಿ ಮತ್ತು 22 ಕಮಾಂಡೋಗಳನ್ನು ಒಳಗೊಂಡಿರುತ್ತದೆ. ಇಂಥ 40-45 ಜನರ ತಂಡ ಸದಾ ಕಾಲ ಸಿದ್ದವಾಗಿರುತ್ತದೆ.

ಈ ಯೋಧರಿಗೆ ಕಠಿಣ ತರಬೇತಿ ನೀಡಲಾಗುತ್ತದೆ, 35 ಕೆಜಿ ಭಾರ ಹೊತ್ತು ಸತತ 40 ಕಿ.ಮೀ ಓಡುವಷ್ಟು ಕಠಿಣ ತರಬೇತಿ ಇವರಿಗೆ ನೀಡಲಾಗಿರುತ್ತದೆ. ಈ ವಿಶೇಷ ಪಡೆಯ ಯೋಧರಿಗೆ 43 ದಿನಗಳ ವಿಶೇಷ ತರಬೇತಿ ನೀಡಲಾಗುತ್ತೆ. ಇವರಿಗೆ ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡುವ ಜೊತೆಗೆ ಮುಷ್ಠಿಯುದ್ಧದ ತರಬೇತಿಯೂ ಇರುತ್ತದೆ. ಚೀನಾದ ಮಾರ್ಷಲ್ ಆರ್ಟ್ಸ್ ಫೈಟರ್ ಗಳಿಗೆ ಮಣ್ಣುಮುಕ್ಕಿಸುವ ತಾಕತ್ತು ನಮ್ಮ ಘಾತಕ ಕಮಾಂಡೋಗಳಿಗೆ ಇದೆ‌.
ಘಾತಕ್ ಕಮಾಂಡೋಗಳ ಬಗ್ಗೆ ಇನ್ನಷ್ಟು ಮಾಹಿತಿ ಈ ವೀಡಿಯೋದಲ್ಲಿದೆ ನೋಡಿ,

error: Content is protected !!