fbpx

ಕಾಂಗ್ರೆಸ್ ಪ್ರತಿಭಟನೆ ಮಧ್ಯೆ ಸಿಕ್ಕು ಒದ್ದಾಡಿದ ‘ಅಂಬ್ಯುಲೆನ್ಸ್’ ವಾಹನ, ವೀಡಿಯೋ ವೈರಲ್

ಕರೋನಾ ಸಂಕಷ್ಟದ ಮಧ್ಯೆಯೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದ‌ ಸೈಕಲ್ ಏರಿ ಐಟಿ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಮ್ಮ ತಮ್ಮ ನಿವಾಸದಿಂದ ಸೈಕಲ್ನಲ್ಲಿ ತೆರಳಿದ್ರು. ಸಿದ್ದರಾಮಯ್ಯಗೆ KPCC ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ ಸಾಥ್ ನೀಡಿದ್ರು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಒಂದು ಕಡೆ ರಾಜ್ಯಸರ್ಕಾರ ಕೊರೊನಾ ತಡೆಯಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದರೆ ಕಾಂಗ್ರೆಸ್ ನಾಯಕರು ಮಾತ್ರ ಪ್ರತಿಭಟನೆ ನೆಪದಲ್ಲಿ ಸಾಮಾಜಿಕ ಅಂತರವನ್ನೂ ಪಾಲಿಸದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯಿಂದಾಗಿ 3 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದಷ್ಟೇ ಅಲ್ಲದೆ ಆಂಬ್ಯುಲೆನ್ಸ್ ಕೂಡ ಜನ ಜಂಗುಳಿಯಲ್ಲಿ ಸಿಕ್ಕಿ ಹಾಕಿಕೊಂಡ ದೃಶ್ಯ ಕಂಡು ಬಂದಿದೆ.

ಪ್ರತಿಭಟನೆಯಲ್ಲಿ ಕೇವಲ 200 ಜನ ಸೇರಲಷ್ಟೇ ಹೈ ಗ್ರೌಂಡ್ಸ್ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಆದರೆ ಇಲಾಖೆ ಷರತ್ತುಗಳನ್ನೆಲ್ಲ ಗಾಳಿಗೆ ತೂರಿ ಧರಣಿಯಲ್ಲಿ 300ಕ್ಕೂ ಹೆಚ್ಚಿನ ಜನ ಭಾಗಿಯಾಗಿದ್ದಾರೆ.

ಕರೋನಾ ಸಂಕಷ್ಟದ ಸಮಯದಲ್ಲಿ ಹೀಗೆ ನೂರಾರು ಜನರನ್ನು ಸೇರಿಸಿ ಪ್ರತಿಭಟನೆಯನ್ನು ನಡೆಸುವ ಅಗತ್ಯವಿತ್ತಾ, ವಿಪತ್ತು‌ ನಿರ್ವಹಣಾ ಕಾಯ್ದೆ 2005ರ ಅಡಿ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ದಾಖಲಿಸಬಹುದಾಗಿದೆ. ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಪ್ರತಿಭಟನೆ ಮಧ್ಯೆ ಅಂಬ್ಯುಲೆನ್ಸ್ ಸಿಲುಕಿರುವ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!