fbpx

ಫ್ರೀಯಾಗಿ ಐಸ್‌ಕ್ರೀಂ ಕೊಡದ್ದಕ್ಕೆ ಗಾಡಿಯನ್ನೇ ಎತ್ತಾಕಿಕೊಂಡು ಹೋದ ಪೋಲೀಸರು, ವೀಡಿಯೋ ವೈರಲ್

ಬಡ ಐಸ್‌ಕ್ರೀಂ ಮಾರಾಟಗಾರನ ಮೇಲೆ ಪೋಲೀಸರಿಬ್ಬರು ದರ್ಪ ತೋರಿದ ಘಟನೆ ಉತ್ತರಪ್ರದೇಶದ ಬರ್ರಾದಲ್ಲಿ ನಡೆದಿದೆ. ತಳ್ಳುಗಾಡಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಲ್ಲಿ ಪ್ರೀಯಾಗಿ ಐಸ್‌ಕ್ರೀಂ ಕೊಡುವಂತೆ ಪೋಲೀಸರು ಕೇಳಿದ್ದು, ಆತ ಕೊಡಲೊಪ್ಪದ ಕಾರಣ ಆತನ ತಳ್ಳುಗಾಡಿಯನ್ನೇ ಎತ್ತಾಕಿಕೊಂಡು ಹೋಗಿದ್ದಾರೆ.

ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓರ್ವ ಪೋಲೀಸ್ ಐಸ್‌ಕ್ರೀಂ ಗಾಡಿಯನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಇನ್ನೊಬ್ಬ ಬೈಕಿನಲ್ಲಿ ಹೋಗುತ್ತಿರೋದನ್ನ ಕಾಣಬಹುದಾಗಿದೆ. ಫ್ರೀಯಾಗಿ ಐಸ್‌ಕ್ರೀಂ ಕೊಟ್ಟಿಲ್ಲ ಎಂಬ ಕಾರಣಕ್ಕೆ ತನ್ನ ಗಾಡಿಯನ್ನು ತೆಗೆದುಕೊಂಡು ಹೋದರು ಎಂದು ವ್ಯಾಪಾರಿ ಆರೋಪಿಸಿದ್ದಾನೆ.

ಆದರೆ ವ್ಯಾಪಾರಿಯ ಆರೋಪವನ್ನು ಪೋಲೀಸರು ಅಲ್ಲಗಳೆದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್.ಪಿ. ಅಪರ್ಣಾ ಗುಪ್ತಾ, ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಐಸ್ ಕ್ರೀಂ ಮಾರಲಾಗುತ್ತಿತ್ತು. ಹಾಗಾಗಿ ಗಸ್ತಿನಲ್ಲಿದ್ದ ಪೊಲೀಸರು ಗಾಡಿಯನ್ನು ತೆಗೆದುಕೊಂಡು ಹೋಗುವಂತೆ ನಾಟಕ ಮಾಡಿದ್ದಾರೆ. ಕೊನೆಗೆ ಐಸ್ ಕ್ರೀಂ ಮಾರುವ ವ್ಯಕ್ತಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

Watch Video

error: Content is protected !!