fbpx

ಚೀನಾದ ಬೆದರಿಕೆಗೆ ಬಗ್ಗದೆ ಭಾರತಕ್ಕೆ ತನ್ನ ಅತ್ಯಾಧುನಿಕ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನೀಡಲು ಮುಂದಾದ ರಷ್ಯಾ

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಬೆನ್ನಲ್ಲೇ ರಷ್ಯಾ ಪ್ರವಾಸ ಕೈಗೊಂಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾಗೆ ಮುಖಭಂಗವುಂಡು ಮಾಡುವಂತಹ ಭಾರೀ ರಕ್ಷಣಾ ಒಪ್ಪಂದವೊಂದನ್ನು ನಡೆಸಿದ್ದಾರೆ. ಈ ಒಪ್ಪಂದದ ಪ್ರಕಾರ ರಷ್ಯಾ ತನ್ನ ಗೆಳೆಯ ಭಾರತಕ್ಕೆ ಅತೀ ಶೀಘ್ರದಲ್ಲಿ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ಎಸ್ -400 ಪೂರೈಸುವುದಾಗಿ ಭರವಸೆ ನೀಡಿದೆ.

ಚೀನಾದ ಕಮ್ಯುನಿಸ್ಟ್ ಸರ್ಕಾರದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ, ‘ಈ ಸೂಕ್ಷ್ಮ ಕಾಲದಲ್ಲಿ ಭಾರತಕ್ಕೆ ಹೊಸ ಶಸ್ತ್ರಾಸ್ತ್ರಗಳನ್ನು ನೀಡಬಾರದು’ ಎಂದು ರಷ್ಯಾಗೆ ಮನವಿ ಮಾಡಿತ್ತು. ಆದರೆ ರಷ್ಯಾ ಚೀನಾದ ಮನವಿಯನ್ನು ಧಿಕ್ಕರಿಸಿದ್ದು, ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗಿನ ಮಾತುಕತೆ ವೇಳೆ ರಷ್ಯಾ ಉಪ ಪ್ರಧಾನಿ ಯೂರಿ ಇವನೊವಿಕ್ ಬೋರಿಸೊವ್ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎಸ್ -400 ಅತ್ಯಂತ ಶೀಘ್ರದಲ್ಲಿ ನೀಡುವುದಾಗಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸಹಕಾರವಿದೆ ಮತ್ತು ಭಾರತದೊಂದಿಗಿನ ಒಪ್ಪಂದವು ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ರಷ್ಯಾ ಭರವಸೆ ನೀಡಿದೆ’ ಎಂದಿದ್ದಾರೆ.

2018 ರಲ್ಲಿಯೇ ಭಾರತ ಮತ್ತು ರಷ್ಯಾ ನಡುವೆ ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಎಸ್ -400 ಖರೀದಿಯ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದರೆ ಈ ವ್ಯವಸ್ಥೆಯ ಒಟ್ಟು ಐದು ಘಟಕಗಳಲ್ಲಿ 5 ಬಿಲಿಯನ್ ಡಾಲರ್ ಅಂದರೆ ಸರಿ ಸುಮಾರು 40 ಸಾವಿರ ಕೋಟಿಗೆ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ.

ಇಷ್ಟೇ ಅಲ್ಲದೆ ಭಾರತವು ರಷ್ಯಾದಿಂದ 31 ಫೈಟರ್ ಜೆಟ್‌ಗಳನ್ನು ಖರೀದಿಸುತ್ತಿದೆ ಹಾಗೂ ಟಿ -90 ಟ್ಯಾಂಕ್‌ನ ಪ್ರಮುಖ ಬಿಡಿ ಭಾಗಗಳ ಬಗ್ಗೆಯೂ ಕೂಡ ಭಾರತ ರಷ್ಯಾದೊಂದಿಗೆ ಮಾತುಕತೆ ನಡೆಸಿದೆ.

Watch Video

error: Content is protected !!