fbpx

ಯೋಗಿ ಕೊಟ್ಟ ಹೊಡೆತಕ್ಕೆ ಬೆಚ್ಚಿಬಿದ್ದ ಚೀನೀ ಕಂಪನಿಗಳು, ಮುಂದೈತೆ ಮಾರಿಹಬ್ಬ

ಭಾರತೀಯ ಯೋಧರ ಹ’ತ್ಯೆ ಮಾಡಿದ ಚೀನಾ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಇದೀಗ ದೇಶದಾದ್ಯಂತ ಆಕ್ರೋಶಗಳು ಹೆಚ್ಚಾಗುತ್ತಿದೆ. ‘ಬ್ಯಾನ್ ಚೈನಾ ಪ್ರಾಡಕ್ಟ್’ ಇದೀಗ ಟ್ರೆಂಡಿಂಗ್ ನಲ್ಲಿದ್ದು, ನಮ್ಮ ಯೋಧರ ರಕ್ತ ಹರಿಸಿದ ಚೀನಾಕ್ಕೆ ಬುದ್ದಿ ಕಲಿಸಲು ಭಾರತೀಯರು ಒಗ್ಗಟ್ಟಾಗಿದ್ದಾರೆ.

ದೇಶದ ಹಲವು ರಾಜ್ಯಗಳು ಚೀನಾ ಉತ್ಪನ್ನಗಳನ್ನು ನಿಶೇಧ ಮಾಡಲು ಮುಂದಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೂಡ ಇದೀಗ ಸರ್ಕಾರಿ ಕಾಮಗಾರಿಗಳಿಗೆ ಚೀನಾ ಉತ್ಪನ್ನಗಳನ್ನು ಬಳಸದಂತೆ ಆದೇಶಿಸಿದೆ. ಇದರ ಪ್ರಾರಂಭಿಕ ಹಂತವಾಗಿ ಚೀನಾ ನಿರ್ಮಿತ ಹೊಸ ವಿದ್ಯುತ್ ಮೀಟರ್‌ಗಳನ್ನು ರಾಜ್ಯ ವಿದ್ಯುತ್ ಇಲಾಖೆ ಅಳವಡಿಸದಂತೆ ನಿಷೇಧ ಹೇರಿದೆ.

ಚೀನಾ ನಿರ್ಮಿತ ವಿದ್ಯುತ್ ಮೀಟರ್ ಅಳವಡಿಕೆಯನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಚೀನಾದ ಮೀಟರ್ ಮತ್ತು ಸಲಕರಣೆಗಳ ಆರ್ಡರ್ಗಳು ಮತ್ತು ಕಳೆದ ಒಂದು ವರ್ಷದಲ್ಲಿ ಮಾಡಲಾದ ಚೀನಿ ವಸ್ತುಗಳ ಒಪ್ಪಂದಗಳ ಬಗ್ಗೆ ವಿವರಗಳನ್ನು ಕೇಳಲಾಗಿದೆ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿಗೆ ಟಿಕ್‌ಟಾಕ್, ಹಲೋ, ಯುಸಿ ನ್ಯೂಸ್, ಯುಸಿ ಬ್ರೌಸರ್, ಕ್ಲಬ್ ಫ್ಯಾಕ್ಟರಿ, ವಂಡರ್ ಕ್ಯಾಮೆರಾ, ಸೆಲ್ಫಿ ಸಿಟಿ ಸೇರಿ ಇತರ 52 ಚೀನೀ ಅಪ್ಲಿಕೇಶನ್‌ಗಳನ್ನು ಡಿಲಿಟ್ ಮಾಡಲು ಆದೇಶಿಸಿದೆ. ಇದಕ್ಕೂ ಮೊದಲು ಹರಿಯಾಣ, ಬಿಹಾರ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಚೀನಾ ಜೊತೆಗಿನ ಅನೇಕ ಒಪ್ಪಂದಗಳನ್ನು ರದ್ದುಪಡಿಸಿದೆ.

error: Content is protected !!