fbpx

Please assign a menu to the primary menu location under menu

ಕರೋನಾ ಪ್ರಕರಣಗಳಲ್ಲಿ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದ್ದಕ್ಕೆ ಸಂಭ್ರಮಾಚರಣೆ, ಮಹಿಳೆಯ ವಿರುದ್ಧ ಆಕ್ರೋಶ

ದೇಶದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ಆರ್ಭಟವನ್ನು ಹೆಚ್ಚಿಸುತ್ತಲೇ ಇದೆ. ವೈರಸ್ ಪತ್ತೆಯಾದ ಮೊದಲ ಎರಡು ತಿಂಗಳುಗಳಲ್ಲಿ ಕರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಂತೆ ಕಾಣಿಸಿದ್ದರೂ ದೆಹಲಿ ತಬ್ಲಿಘಿ ಪ್ರಕರಣದಿಂದ ಹಾಗೂ ಲಾಕ್‌ಡೌನ್ ತೆರವಿನ ಬಳಿಕ ಒಂದೇ ಸಲ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಾ ಹೋಯಿತು.

ಕರೋನಾ ನಿಯಂತ್ರಣಕ್ಕೆ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಮ್ಮಿಯಾಗುತ್ತಿಲ್ಲ. ದೇಶದಲ್ಲಿ ಒಟ್ಟು ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 60ಪ್ರತಿಶತ ರೋಗಿಗಳು ಗುಣಮುಖರಾಗಿದ್ದಾರೆ. ಇದೀಗ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದೆ.ಇದೇ ವಿಷಯವನ್ನಿಟ್ಟುಕೊಂಡು ಮಮತಾ ಅರಸೀಕೆರೆ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ವ್ಯಕ್ತಪಡಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾಳೆ. ಕರೋನಾ ಪ್ರಕರಣಗಳಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಿರೋದು ಬಹಳ ಸಂತೋಷದ ವಿಷಯ, ಮೊದಲ ಸ್ಥಾನಕ್ಕೆ ಏರಿದ್ದರೆ ಇನ್ನೂ ಸಂತೋಷವಾಗುತ್ತಿತ್ತು ಎಂದು ತನ್ನ ವಿಕೃತ ಮನಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಈಕೆ ಶಾಲಾ ಶಿಕ್ಷಕಿ ಎಂದು ತಿಳಿದುಬಂದಿದ್ದು, ಇಂತಹ ವಿಕೃತ ಮನಸ್ಸಿನವರ ಅಡಿಯಲ್ಲಿ ವಿದ್ಯಾಭ್ಯಾಸ ಪಡೆಯುವ ಮಕ್ಕಳ ಭವಿಷ್ಯ ಹೇಗಿರಬಹುದು ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

error: Content is protected !!