fbpx

ಟಿಕ್-ಟಾಕ್ ವೀಡಿಯೋಗಾಗಿ ರಾಷ್ಟ್ರಧ್ವಜಕ್ಕೆ ಬೆಂಕಿ ಇಟ್ಟ ಮುಸ್ಲಿಂ ಯುವಕರು, ಓರ್ವನ ಬಂಧನ (ವೀಡಿಯೋ)

ಟಿಕ್-ಟಾಕ್‌ಗಾಗಿ ಭಾರತದ ರಾಷ್ಟ್ರಧ್ವಜವನ್ನು ಸುಟ್ಟು ವೀಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಪ್ರಕರಣದ ಸಂಬಂಧ ಓರ್ವ ಆರೋಪಿಯನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದು ಇನ್ನೂ ಮೂವರ ಬಂಧನಕ್ಕಾಗಿ ಪೋಲೀಸರು ಬಲೆ ಬೀಸಿದ್ದಾರೆ.

ಲಖನೌ ನ ಬಜಾರ್‌ಖಲ ಏರಿಯಾದಲ್ಲಿ ನಾಲ್ವರು ಅಪ್ರಾಪ್ತ ಯುವಕರು ಭಾರತದ ರಾಷ್ಟ್ರಧ್ವಜವನ್ನು ಸುಟ್ಟು ವೀಡಿಯೋ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ರವಿಕಾಂತ್ ಸಿಂಗ್ ಎಂಬ ವ್ಯಕ್ತಿ ಯುವಕರನ್ನು ರಾಷ್ಟ್ರಧ್ವಜ ಸುಡುವುದರಿಂದ ತಡೆಯಲು ಯತ್ನಿಸಿದ್ದಾರೆ. ಆದರೆ ಯುವಕರು ರವಿಕಾಂತ್ ಮೇಲೆಯೇ ತಿರುಗಿಬಿದ್ದಿದ್ದು, ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದೂ ಅಲ್ಲದೆ ದೇಶದ್ರೋಹಿ ಘೋಷಣೆಯನ್ನೂ ಕೂಗಿದ್ದಾರೆ.

ತಕ್ಷಣ ರವಿಕಾಂತ್ ಅವರು ರಕ್ಷಣೆಗಾಗಿ ಜನರನ್ನು ಕರೆದಿದ್ದು, ಜನರ ಜಮಾವಣೆಯಾಗುತ್ತಿದ್ದಂತೆ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೆ ತಪ್ಪಿಸಿಕೊಳ್ಳುತ್ತಿದ್ದ ನಾಲ್ವರಲ್ಲಿ ಒಬ್ಬ ಯುವಕನನ್ನು ಜನರೇ ಹಿಡಿದು ಥಳಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ಯುವಕ ಸಮಾಜವಾಧಿ ಪಕ್ಷದ ಮುಖಂಡನ ಸಂಬಂಧಿ ಎಂದು ತಿಳಿದುಬಂದಿದ್ದು, ಬಂಧನದ ಮಾಹಿತಿ ಸಿಕ್ಕಿದ್ದೇ ತಡ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ದೇಶದ್ರೋಹಿ ಯುವಕನ ಬಿಡುಗಡೆ ಮಾಡಬೇಕು ಎಂದು ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು ಎಂದು ತಿಳಿದುಬಂದಿದೆ.

ಆದರೆ ಪೋಲೀಸರು ಯಾವುದೇ ಪ್ರತಿಭಟನೆಗೆ ಬಗ್ಗದೆ ಬಂಧಿತ ಯುವಕನ ಮೇಲೆ ಐಪಿಸಿ ಸೆಕ್ಷನ್ 124 (A), 153 (A), 504, 505 (1) (B) (2), 352, 325, 506 ಅಡಿಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ತಪ್ಪಿಸಿಕೊಂಡಿರುವ ಇನ್ನೂ ಮೂವರು ಯುವಕರ ಮಾಹಿತಿ ಸಂಗ್ರಹಿಸಿರುವ ಪೋಲೀಸರು, ಅವರ ಬಂಧನಕ್ಕಾಗಿ ಪೋಲೀಸರು ಬಲೆಬೀಸಿದ್ದಾರೆ.

Watch Video

error: Content is protected !!