fbpx

20 ಯೋಧರು ಹುತಾತ್ಮರಾಗೋಕೆ ಭಾರತೀಯ ಸೇನೆಯ ನಿರ್ಲಕ್ಷ್ಯ ಕಾರಣ ಎಂದ ಪತ್ರಕರ್ತೆ, ವೀಡಿಯೋ ವೈರಲ್

ಲಡಾಖ್‌ನ ‌ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಚೀನೀ ಸೈನಿಕರ ಮಧ್ಯೆ ನಡೆದ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಚೀನಾ ಸೇನೆಯಲ್ಲಿಯೂ ಅಪಾರ ಸಾವುನೋವು ಸಂಭವಿಸಿದ್ದು, ಸುಮಾರು 40ಕ್ಕೂ ಹೆಚ್ಚು ಚೀನೀ ಸೈನಿಕರು ಹತರಾಗಿದ್ದಾರೆ ಎನ್ನಲಾಗುತ್ತಿದೆ.

ಭಾರತೀಯ ಸೇನೆ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಮಾಹಿತಿಯನ್ನು ಬಹಿರಂಗಪಡಿಸಿದ್ದರೆ, ಚೀನಾ ಮಾತ್ರ ತಮ್ಮ ಸೇನೆಯ ಸಾವು-ನೋವಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದೀಗ ಈ ಘರ್ಷಣೆ ಪ್ರಕರಣ ಭಾರತದಲ್ಲಿ ಚೀನಾ ವಿರುದ್ಧ ಎದ್ದಿರುವ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಅನೇಕರು ಭಾರತ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಸಮರ್ಥತೆಯೇ ಭಾರತೀಯ ಯೋಧರ ಸಾವಿಗೆ ಕಾರಣ, ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಚೀನಾದ ಜೊತೆ ಭಾರತ ಹೊಂದಿರುವ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನಿಲ್ಲಿಸುವಂತೆ ಅನೇಕರು ಬೇಡಿಕೆ ಇಟ್ಟಿದ್ದಾರೆ.

ಆದರೆ ಖಾಸಗಿ ಹಿಂದಿ ಸುದ್ದಿವಾಹಿನಿ ಆಜ್ ತಕ್ ನ ಪತ್ರಕರ್ತೆ ಮಾತ್ರ ಯೋಧರ ಸಾವಿಗೆ ಸೇನೆಯನ್ನೇ ದೋಷಿಯಾಗಿಸಿದ್ದಾಳೆ. ಕೇಂದ್ರಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿರುವ ಪತ್ರಕರ್ತೆ, ಈ ಎಲ್ಲಾ ಘಟನೆಗಳಿಗೆ ಭಾರತೀಯ ಸೇನೆಯೆ ಕಾರಣ‌. ಚೀನಾ ಸೇನೆ ಭಾರತದ ಭೂಪ್ರದೇಶ ಪ್ರವೇಶಿಸಿದರೂ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವುದೇ ಈ ಘಟನೆಗೆ ಕಾರಣ ಎಂದು ಹೇಳಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೋ ಇಲ್ಲಿದೆ ನೋಡಿ,

error: Content is protected !!