fbpx

ಭಾರತ-ಚೀನಾ ಘರ್ಷಣೆ: ಚೀನಾದ ಯೋಧರ ಸಾ’ವಿನ ಲೆಕ್ಕ ನೀಡಿದ ಅಮೇರಿಕಾ ಗುಪ್ತಚರ ಸಂಸ್ಥೆ

ಸೋಮವಾರ ಲಡಾಖ್‌ನ ‌ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು ಅನೇಕರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಮಾಹಿತಿಯನ್ನು ಬಹಿರಂಗಪಡಿಸಿದ್ದರೆ, ಚೀನಾದ ಎಷ್ಟು ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಲೆಕ್ಕ ಸಿಕ್ಕಿಲ್ಲ.

ಇದೀಗ ಅಮೇರಿಕಾ ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, 35ಕ್ಕೂ ಹೆಚ್ಚು ಚೈನೀಸ್ ಯೋಧರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದಾರೆ. ಸೋಮವಾರ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಸೇನಾ ಅಧಿಕಾರಿ ಸೇರಿ 35 ಚೀನಾ ಸೈನಿಕರು ಹತರಾಗಿದ್ದಾರೆ ಎಂದು ಅಮೇರಿಕಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತೀಯ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ತಮ್ಮ ಸೈನಿಕರು ಹತರಾಗಿದ್ದಾರೆ ಎಂದು ಚೀನಾ ದೃಢಪಡಿಸಿದ್ದರೂ, ನಿಖರವಾದ ಸಂಖ್ಯೆ ಹೇಳಿಲ್ಲ. ಆದರೆ ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 45ಕ್ಕೂ ಹೆಚ್ಚು ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿವೆ.

error: Content is protected !!