fbpx

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯರ ಮುಂದೆ ಸಿದ್ಧರಾಮಯ್ಯ ಹೀಗಾ ವರ್ತಿಸೋದು! ವೈರಲ್ ವೀಡಿಯೋ ನೋಡಿ

ಮನವಿ ಮಾಡಲು ಬಂದ ಮಹಿಳೆಯರ ಬಳಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಉಡಾಫೆಯಾಗಿ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಬಾಗಲಕೋಟೆಯ ಬಾದಾಮಿಯಲ್ಲಿ ಮನೆ ಹಕ್ಕುಪತ್ರ ವಿತರಿಸುವಂತೆ ಮಹಿಳೆಯರು ಶಾಸಕ ಸಿದ್ಧರಾಮಯ್ಯನವರಲ್ಲಿ ಮನವಿ ಮಾಡಲು ಆಗಮಿಸಿದ್ದರು. ಆದರೆ ಸಿದ್ಧರಾಮಯ್ಯನವರು ಮಹಿಳೆಯರ ಮನವಿಯನ್ನು ಕಿವಿಗೆ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಮಹಿಳೆಯರು ಸಿದ್ಧರಾಮಯ್ಯನವರು ತೆರಳುತ್ತಿದ್ದ ಕಾರು ತಡೆದು ಮನವಿ ಸಲ್ಲಿಸುತ್ತಿದ್ದರೆ, ಸಿದ್ದರಾಮಯ್ಯ ಮಾತ್ರ ಮಹಿಳೆಯರ ಮುಂದೆ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಅರಣ್ಯ ಇಲಾಖೆ ಜಾಗದಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಲಾಗಿದ್ದು, ಈ ಕಾರಣದಿಂದ ನಾವೆಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಈ ಸಂಬಂಧ ಹಕ್ಕುಪತ್ರ ವಿತರಿಸುವಂತೆ ಮಹಿಳೆಯರು ಮನವಿ ಮಾಡಿದ್ದಾರೆ.

ಆದರೆ ಸಿದ್ದರಾಮಯ್ಯ ಮಾತ್ರ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ಉಡಾಫೆ ವರ್ತನೆ ತೋರಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ

Watch Video


error: Content is protected !!