fbpx

ದುಬೈನಲ್ಲಿರುವ ಭಾರತೀಯರಿಗೆ ಬಿಗ್ ಶಾ’ಕ್ ಕೊಟ್ಟ ದುಬೈ ಪ್ರಿನ್ಸ್

ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಅನೇಕ ಜನರಿಗೆ ಸಂಕಷ್ಟ ಎದುರಾಗಿದ್ದು ಭಾರತ ಬಿಟ್ಟು ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದವರಿಗಂತೂ ತುಂಬಾ ಕಷ್ಟಕರ ಪರಿಸ್ಥಿತಿ ಎದುರಾಗಿದೆ ಎಂದು ಹೇಳಬಹುದು ಯಾಕಂದ್ರೆ ಬೇರೆ ದೇಶದ ಸರ್ಕಾರ ತನ್ನ ದೇಶದ ಪ್ರಜೆಗಳಿಗೆ ಸಾಕುವಲ್ಲಿ ಹರಸಾಹಸ ಪಡುತ್ತಿದ್ದಾರೆ ಹೀಗಾಗಿ ಭಾರತದಿಂದ ಬಂದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಈ ಕಾರಣದಿಂದಾಗಿ ಹಲವಾರು ದೇಶಗಳು ಭಾರತೀಯರನ್ನು ತಮ್ಮ ದೇಶಕ್ಕೆ ಮರಳಿ ಎಂಬ ಸಂದೇಶ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೂಡ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಕರೆತರಲು ವಿಮಾನ ಹಾಗೂ ಹಡಗುಗಳ ವ್ಯವಸ್ಥೆ ಮಾಡುವ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದ್ದಾರೆ. ವಿದೇಶದಲ್ಲಿರುವ ಭಾರತೀಯರಿಗೆ ಅಲ್ಲಿನ ಸರ್ಕಾರ ನಡೆದುಕೊಳ್ಳುವ ರೀತಿಯಿಂದಾಗಿ ಅವರ ಆ’ಕ್ರೋಶಕ್ಕೆ ಕಾರಣವಾಗಿದೆ.


Continue Reading

ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದ ಎಲ್ಲ ದೇಶಗಳಿಗೂ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಹೀಗಾಗಿ ನ್ಯೂಸ್ ಟ್ರ್ಯಾಕ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸೌದಿ ಅರೇಬಿಯಾ ಕೂಡ ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾ ಕೂಡ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಮುಂಬರುವ ದಿನಗಳು ಬಹಳಷ್ಟು ಕಷ್ಟಕರವಾಗಲಿವೆ ಎಂದು ಸೌದಿ ರಾಜ ತಿಳಿಸಿದ್ದಾರೆ.

ವಾಸ್ತವವಾಗಿ, ಸೌದಿ ಅರೇಬಿಯಾವು ಖಾಸಗಿ ವಲಯದ ಕಂಪನಿಗಳ ನೌಕರರ ವೇತನವನ್ನು ಸುಮಾರು 40% ಕಡಿತಗೊಳಿಸಲು ಆದೇಶ ನೀಡಿದೆ. ಸೌದಿ ಅರೇಬಿಯಾದ ಪ್ರಮುಖ ಪತ್ರಿಕೆ ಅಶ್ರಕ್ ಅಲ್ ಅವಸತ್ ಅವರ ವರದಿಯ ಪ್ರಕಾರ, ಕೋವಿಡ್ 19 ರ ಕಾರಣದಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಸೌದಿಯಲ್ಲಿ ಕೆಲಸ ಮಾಡುವ ಜನರ ಒಪ್ಪಂದಗಳನ್ನು ಸಹ ಕಡಿತಗೊಳಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ:  ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

ಸೌದಿ ಅರೇಬಿಯಾದಲ್ಲಿ ಸುಮಾರು 26 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆಂಬುದು ಗಮನಾರ್ಹ ಸಂಗತಿ ಹೀಗಾಗಿ ಈ ಸಂದರ್ಭದಲ್ಲಿ ಸೌದಿ ಅರೇಬಿಯಾದ ಈ ನಿರ್ಧಾರವು ಅವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗ್ತಿದೆ, ಮೂಲ ಸುದ್ದಿಯ ಪ್ರಕಾರ, ಕಾರ್ಮಿಕ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಲು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಅನುಮೋದನೆ ನೀಡಿದೆ.

ಸೌದಿ ಸರ್ಕಾರದ ಈ ಅನುಮೋದನೆಯಲ್ಲಿ, ಕಾರ್ಮಿಕರ ಕಾನೂನಿನಲ್ಲಿನ ಬದಲಾವಣೆಗಳನ್ನು ತರಲಾಗಿದ್ದು, ಅನೇಕ ಕಂಪನಿಗಳು ತಮ್ಮ ನೌಕರರ ವೇತನವನ್ನು ಮುಂದಿನ 6 ತಿಂಗಳವರೆಗೆ 40 ಪ್ರತಿಶತದಷ್ಟು ಕಡಿತಗೊಳಿಸಬಹುದು. ಹಾಗೂ ಹೊಸ ನಿಯಮಗಳ ಪ್ರಕಾರ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 6 ತಿಂಗಳ ನಂತರ ಕಂಪೆನಿಗಳು ನೌಕರರ ಒಪ್ಪಂದಗಳನ್ನು ರದ್ದುಗೊಳಿಸಬಹುದು ಹೀಗೆ ಮಾಡುವುದರಿಂದ ಅನೇಕ ಭಾರತೀಯರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

Trending Short Videos

close

This will close in 26 seconds

error: Content is protected !!