fbpx

ಮೋದಿ ಸರ್ಕಾರದ ಆರೋಗ್ಯ ಸೇತು ಆ್ಯಪ್ ನಂತರ ಯೋಗಿ ಸರ್ಕಾರ ಬಿಡುಗಡೆ ಮಾಡಿದೆ ಈ ಆ್ಯಪ್: ಇದರ ವಿಶೇಷತೆ ಏನು ಗೊತ್ತೆ

ದೇಶದಾದ್ಯಂತ ಲಾಕ್‌ಡೌನ್‌ನಿಂದಾಗಿ ಉತ್ತರ ಪ್ರದೇಶದ ನಿವಾಸಿಗಳು ರಾಜ್ಯದಿಂದ ಹೊರಗೆ ವಲಸೆ ಹೋಗಿದವರನ್ನು ಕರೆತರಲು ಹಾಗೂ ಅವರ ಅನುಕೂಲಕ್ಕಾಗಿ ನೋಂದಣಿ ಪೋರ್ಟಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆಯಂತೆ. ಲಾಕ್‌ಡೌನ್ ಕಾರಣದಿಂದಾಗಿ ದೇಶದ ಜನರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಕಷ್ಟಕರವಾಗಿದೆ ಹೀಗಾಗಿ ಹೊರ ರಾಜ್ಯದಲ್ಲಿ ವಾಸಿಸಿದ ಉತ್ತರಪ್ರದೇಶದ ಜನರನ್ನು ವಾಪಸ್ ಕರೆತರಲು ಯೋಗಿ ಆದಿತ್ಯನಾಥ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಿದ್ದಾರೆ.

ಈ ನೋಂದಣಿ ಸೌಲಭ್ಯವನ್ನು ಎನ್‌ಐಸಿ ಉತ್ತರ ಪ್ರದೇಶದ ಜನುಸುನವಾಯಿ ಎಂಬ ಪೋರ್ಟಲ್‌ನಲ್ಲಿ ‘ಉತ್ತರ ಪ್ರದೇಶದಿಂದ ಇತರ ರಾಜ್ಯಗಳಿಗೆ’ ಮತ್ತು ‘ಇತರ ರಾಜ್ಯಗಳಿಂದ ಉತ್ತರ ಪ್ರದೇಶಕ್ಕೆ’ ವಲಸೆಗಾಗರಿಗೆ ಈ ಲಿಂಕ್‌ಗಳ ಮೂಲಕ ಸಹಾಯವಾಗುವಂತೆ ಅಭಿವೃದ್ಧಿಪಡಿಸಿದ್ದಾರೆ. ಈ ಲಿಂಕ್‌ಗಳ ಮೂಲಕ, ಇತರ ರಾಜ್ಯಗಳ ಜನರು ಉತ್ತರ ಪ್ರದೇಶಕ್ಕೆ ವಲಸೆ ಬರುತ್ತಾರೆ ಮತ್ತು ಉತ್ತರಪ್ರದೇಶದ ಜನರು ಇತರ ರಾಜ್ಯಗಳಿಗೆ ಹೊದರವರು ವಲಸೆ ಬರಲು ಸಹಾಯಕವಾಗುತ್ತಿದೆ.


Continue Reading

ಈ ಸೌಲಭ್ಯವು ಮೇ 5 ರಂದು ಮಂಗಳವಾರ, ಜನಸುನವಾಯ್ ಪೋರ್ಟಲ್‌ನ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಸಹ ಲಭ್ಯವಿರುತ್ತದೆ ಎಂದಿದ್ದಾರೆ. ಈ ಜನಸುನವಾಯ್ ಪೋರ್ಟಲ್‌ನಲ್ಲಿ ಮಾಡಿದ ನೋಂದಣಿಯಾದವರಿಗೆ ಅವರ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು ನಂತರ ಸಮರ್ಥರಿಗೆ ಅನುಮತಿಯ ಮೇರೆಗೆ ಅರ್ಜಿದಾರರಿಗೆ ಪ್ರಯಾಣ ಮಾಡಬಹುದಾದಂತಹ ಎಲ್ಲಾ ಮಾಹಿತಿ ಅದರಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ:  ಆಟವಾಡುತ್ತಾ ಎರಡು ವರ್ಷದ ತಮ್ಮನನ್ನೇ ರೈಲಿನ ಅಡಿಗೆ ದೂಡಿದ ಅಣ್ಣ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಈ ಆ್ಯಪ್‌ನಲ್ಲಿ ನೋಂದಣಿ ಮಾಡಿದವರು ಇತರ ರಾಜ್ಯಗಳಿಂದ ಉತ್ತರ ಪ್ರದೇಶಕ್ಕೆ ಬರಲು, ಅರ್ಜಿದಾರನು ತನ್ನ ಹೆಸರು, ವಯಸ್ಸು, ಪ್ರಯಾಣಿಕರ ವರ್ಗ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್, ಗುರುತಿನ ಚೀಟಿ ಮತ್ತು ಸಂಖ್ಯೆಯನ್ನು ಹೊಂದಿರಬೇಕು, ಕುಟುಂಬದೊಂದಿಗೆ ಪ್ರಯಾಣಿಸುವ ಬಗ್ಗೆ, ಪ್ರಯಾಣದ ವಿಧಾನ ಅದರಲ್ಲಿ ಲಭ್ಯವಿರುತ್ತದೆ, ಅರ್ಜಿದಾರನು ಶೀತ ಕೆಮ್ಮು ಅಥವಾ ಜ್ವರ ಅಥವಾ ಸಂಬಂಧಿತ ರೋಗಲಕ್ಷಣಗಳಿದ್ದರೆ ಅವರನ್ನು 14 ದಿನಗಳವರೆಗೆ ನಿರ್ಬಂಧಿಸಲಾಗುವುದು.

ಅರ್ಜಿದಾರನು ಉತ್ತರ ಪ್ರದೇಶವನ್ನು ತಲುಪಿದಾಗ, ಅವನು ಅಗತ್ಯವಾದ ಸಂಪರ್ಕತಡೆಯನ್ನು ಪಾಲಿಸಬೇಕು. ಅರ್ಜಿದಾರನು ಬಂದ ನಂತರ ಎರಡು ತಿಂಗಳವರೆಗೆ ಯಾವುದೇ ಗುಂಪು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಬೇಕು. ಒಂದು ವೇಳೆ ಅರ್ಜಿದಾರ ಮಾಹಿತಿಯು ಸರಿಯಾಗಿ ನೀಡಿಲ್ಲ ಎಂದು ಕಂಡುಬಂದಲ್ಲಿ, ಸಾಂಕ್ರಾಮಿಕ ಕಾಯ್ದೆ ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಲಾಗಿದೆ.

Trending Short Videos

This will close in 26 seconds

error: Content is protected !!