fbpx

Please assign a menu to the primary menu location under menu

P’OK ಖಾಲಿ ಮಾಡೋದಷ್ಟೇ ಅಲ್ಲ ಪಾ’ಕ್‌ಗೆ ಮತ್ತೊಂದು ಶಾ’ಕ್ ಕೊಟ್ಟ ಪ್ರಧಾನಿ ಮೋದಿ

ಕರೋನಾ ವೈರಸ್ ಪ್ರಪಂಚದಾದ್ಯಂತ ಹೆಚ್ಚಾಗುತ್ತಿದೆ, ಇಂತಹ ಸಂದರ್ಭದಲ್ಲಿ ಪಾಕಿಸ್ತಾನವು ತನ್ನ ಹುಚ್ಚುತನ ಮುಂದುವರೆಸಿದೆ. ಎಲ್ಲಾ ದೇಶಗಳಲ್ಲಿ ಈ ದೇಶವು ಅತ್ಯಂತ ಕೆಟ್ಟ ದೇಶವಾಗಿದ್ದು, ಕೊರೊನಾದಂತಹ ಮಹಾಮಾರಿಯ ಸಂದರ್ಭದಲ್ಲಿಯೂ ಸಹ ತನ್ನ ನರಿ ಬುದ್ದಿ ಮುಂದುವರೆಸಿದೆ. ಹೌದು ಪಾಕಿಸ್ತಾನ ತನ್ನ ದೇಶದಲ್ಲಿ ವಾಸಿಸುವ ಹಿಂದುಗಳಿಗೆ ಆಹಾರ ಪದಾರ್ಥಗಳನ್ನು ನೀಡದೆ ಉಪವಾಸಕ್ಕೆ ದೂಡುತ್ತಿದೆ.

ಇಷ್ಟೇ ಅಲ್ಲದೆ ಭಾರತದ ಗಡಿಯಲ್ಲಿ ಭ’ಯೋತ್ಪಾದಕರ ಮೂಲಕ ಶಾಂತಿ ಭಂ’ಗ ಮಾಡುವ ಮೂಲಕ ನಿರಂತರವಾದ ದಾಳಿ ಮಾಡುತ್ತಿದೆ. ಭಾರತ ಒಂದು ಕಡೆ ಕರೋನಾ ವಿರುದ್ಧದ ಯು’ದ್ಧವನ್ನು ಮಾಡುತ್ತಿದ್ದರೆ ಇನ್ನೊಂದು ಕಡೆ ಪಾಕಿಸ್ತಾನದಿಂದ ಭಾರತಕ್ಕೆ ನುಗ್ಗುವ ನುಸುಳುಕೋರರನ್ನು ಬಗ್ಗು ಬಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕಳೆದ ದಿನ ಹಂದ್ವಾರದಲ್ಲಿ ನಮ್ಮ ಐದು ಜನ ಭಾರತೀಯರು ಹುತಾತ್ಮರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತನ್ನದೇ ಆದ ಭಾಷೆಯಲ್ಲಿ ಉತ್ತರವನ್ನು ನೀಡಲು ಪ್ರಧಾನಿ ಮೋದಿ ನಿರ್ಧರಿಸಲಾಗಿದ್ದು, ಗಿಲ್ಗಿಟ್ ಬಾಲ್ಟಿಸ್ತಾನ್ ಕುರಿತು ಪಾಕಿಸ್ತಾನ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಈ ವಿಷಯದ ಕುರಿತು ಭಾರತ, ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರನ್ನು ಕರೆದು ಅತೀ ದೊಡ್ಡ ಹೇಳಿಕೆಯೊಂದನ್ನು ನೀಡಿದೆ.

ಈ ಪ್ರಕರಣದ ಕುರಿತು ಮಾತನಾಡಿದ ಮೋದಿ ಸರ್ಕಾರದ ವಿದೇಶಿ ಮಂತ್ರಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಒಳಗೊಂಡಂತೆ ಗಿಲ್‌ಗಿತ ಬಾಲ್ಟಿಸ್ತಾನ ಪ್ರದೇಶವು ಕೂಡ ಭಾರತದ ಆಂತರಿಕ ಭಾಗವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಮೋದಿ ಸರ್ಕಾರ ಪಾಕಿಸ್ತಾನಕ್ಕೆ ರವಾನಿಸಿದೆ. 1994 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಪ್ರಸ್ತಾವನೆಯಲ್ಲಿ ಈ ವಿಷಯದ ಬಗ್ಗೆ ಭಾರತದ ನಿಲುವು ಕಂಡುಬಂದಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಹಿಉಗಾಗಿ ಗಿಲ್‌ಗಿತ್ ಬಾಲ್ಟಿಸ್ತಾನದ ಪ್ರದೇಶವನ್ನು ಎರಡು ರಾಷ್ಟ್ರಗಳು ಸರ್ವಾನುಮತದಿಂದ ಅಂಗೀಕರಿಸಿವೆ ಹೀಗಾಗಿ ಆ ಪ್ರದೇಶಗಳು ಸಹ ಭಾರತದ ಆಂತರಿಕ ಭಾಗವಾಗಿವೆ ಹೀಗಾಗಿ ಪಾಕಿಸ್ತಾನ ಅಥವಾ ಅದರ ನ್ಯಾಯಾಂಗವು ಅದನ್ನು ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಯೋಚನೆಯೂ ಮಾಡಬಾರದು ಎಂದು ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಎರಡು ಭೂಪ್ರದೇಶಗಳನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಳ್ಳುವುದು ಬಿಡಬೇಕು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಪಾಕ್ ಸರ್ಕಾರ ಪ್ರಯತ್ನಿಸಬಾರದು ಎಂದು ಪಾಕ್‌ಗೆ ಭಾರತ ಸರ್ಕಾರ ಖಡಕ್ ಆಗಿ ಹೇಳಿದೆ. ವಾಸ್ತವವಾಗಿ, ಪಾಕಿಸ್ತಾನ ನ್ಯಾಯಾಲಯವು ಕಳೆದ ವಾರ ಗಿಲ್‌ಗಿತ ಹಾಗೂ ಬಾಲ್ಟಿಸ್ತಾನ್ ಕುರಿತಾಗಿ 2018 ರ ತಿದ್ದುಪಡಿಗೆ ಅನುಮತಿ ನೀಡುವುದಾಗಿ ಆದೇಶ ನೀಡಿತ್ತು.

ಮುಂಬರುವ ಸೆಪ್ಟೆಂಬರ್‌ ತಿಂಗಳಿನಲ್ಲಿ ಆ ಎರಡು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸರ್ಕಾರವನ್ನು ನಡೆಸಲು ಹಾಗೆಯೇ ಅಲ್ಲಿ ಒಂದು ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲು ಅನುಮತಿ ನೀಡಿತ್ತು. ಆದ್ದರಿಂದ ಪಾಕ್ ನ್ಯಾಯಾಲಯ ತೆಗೆದುಕೊಂಡ ಈ ನಿರ್ಧಾರಕ್ಕೆ ಮೋದಿ ಸರ್ಕಾರ ತೀವ್ರವಾಗಿ ಖಂಡಿಸುವ ಮೂಲಕ ಪಾಕ್‌ಗೆ ಎಚ್ಚರಿಕೆ ನೀಡಿದೆ.

error: Content is protected !!