fbpx

ಇವತ್ತು ಹಿಂದು ಧರ್ಮ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ಈ ಮಹಾರಾಜನೇ ಕಾರಣ

ನಾವಿಂದು ಹಿಂದುಗಳು ಎಂದು ಧೈರ್ಯದಿಂದ ಹೆಮ್ಮೆಯಿಂದ ಹೇಳುತ್ತೆವೆ ಎಂದರೆ ಅದಕ್ಕೆ ಕಾರಣ ಅನೇಕ ಹಿಂದೂ ರಾಜರ ಕೊಡುಗೆಯಾಗಿದೆ ಆದರೆ ಅದರಲ್ಲಿ ಪ್ರಮುಖ ರಾಜ ಯಾರೆಂದು ತಿಳಿಯಬೇಕಾದರೆ ನೀವು ಈ ಅಂಕಣವನ್ನು ಪೂರ್ತಿಯಾಗಿ ಓದಲೇಬೇಕು. ಹೌದು ಭಾರತದ ಅನೇಕ ಜನರು ತಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿದರೆ ಇನ್ನೂ ಕೆಲವರು ತಾವು ತಮ್ಮ ಪೂರ್ವಜರ ಕುರಿತಾಗಿ ಗೊತ್ತಿಲ್ಲದೆ ತಿಳಿದುಕೊಳ್ಳುವ ಪ್ರಯತ್ನವೂ ಮಾಡದೆ ತಟಸ್ಥರಾಗಿ ಬದುಕುತ್ತಿದ್ದಾರೆ.

ಮಹಾರಾಜ ವಿಕ್ರಮಾದಿತ್ಯರನ್ನು ಭಾರತದ ಇತಿಹಾಸದಲ್ಲಿ ಅತ್ಯುತ್ತಮ ರಾಜ ಎಂದು ಪರಿಗಣಿಸಲಾಗಿದ್ದು ಅವರು ಭಾರತವನ್ನು ಚಿನ್ನದ ಪಕ್ಷಿಯನ್ನಾಗಿ ಮಾಡುವ ಮೂಲಕ ಅವರ ಕಾಲವನ್ನು ಸುವರ್ಣ ಅವಧಿಯನ್ನು ಸೃಷ್ಟಿ ಮಾಡಿದ್ದರು ಎನ್ನಲಾಗಿದೆ. ಇಂದು ಈ ದೇಶ ಹಿಂದೂ ಮತ್ತು ಹಿಂದುತ್ವದ ಸಂಸ್ಕೃತಿ ಅಸ್ತಿತ್ವದಲ್ಲಿರುವುದು ವಿಕ್ರಮಾದಿತ್ಯ ರಾಜನಿಂದಾಗಿ ಎಂದರೆ ಬಹುಶಃ ತಪ್ಪಾಗಲಾರದು.

ಅಂದಿನ ಕಾಲದಲ್ಲಿ ಅಶೋಕ ಹಾಗೂ ಮೌರ್ಯ ಕೂಡ ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ 25 ವರ್ಷಗಳ ಕಾಲ ಅವರು ಬೌದ್ಧರಾಗಿ ದೇಶವನ್ನಾಳಿದರುಮ. ಭಾರತದಲ್ಲಿ ಆಗ ಸನಾತನ ಧರ್ಮ ಮುಗಿದೆ ಹೋಯಿತ್ತು ಎಂಬ ಭೀತಿ ಶುರುವಾಗಿತ್ತು. ದೇಶದಲ್ಲಿ ಬೌದ್ಧರು ಮತ್ತು ಜೈನರು ಇರಬೇಕು ಎಂಬುವ ಎರಡು ಆಯ್ಕೆಗಳು ಮಾತ್ರ ಜನರ ಬಳಿ ಇದ್ದವು.

ಆ ಸಂದರ್ಭದಲ್ಲಿ ರಾಮಾಯಣ ಹಾಗೂ ಮಹಾಭಾರತ ಪುಸ್ತಕಗಳು ಕಳೆದು ಹೋಗಿದ್ದವು ಆ ಸಂದರ್ಭದಲ್ಲಿ ಮಹಾರಾಜ ವಿಕ್ರಮಾದಿತ್ಯ ಪುನಃ ಆ ಗ್ರಂಥಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪುನಃ ಬೆಳಕಿಗೆ ತಂದರು. ನಂತರ ಆ ಗ್ರಂಥಗಳನ್ನುಬಜನರಿಗೆ ಹಂಚುವ ಮೂಲಕ ಹಿಂದುತ್ವ ಅರಿವು ಮೂಡಿಸಿದ್ದರಂತೆ. ಈ ರೀತಿಯಾಗಿ ಮಹಾರಾಜ ವಿಕ್ರಮಾದಿತ್ಯ ಅವರು ಧರ್ಮವನ್ನು ಉಳಿಸಿದ್ದು ಎಂದು ಹಲವು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿರುವ ಅಕ್ರಮ ಮಸೀದಿ ತೆರವಿಗೆ ಕೋರ್ಟ್‌ನಲ್ಲಿ ದಾವೆ! ಇಲ್ಲಿದೆ‌ ಡಿಟೈಲ್ಸ್

ಇಷ್ಟೇ ಅಲ್ಲದೆ ದೇಶವನ್ನು ಆರ್ಥಿಕವಾಗಿ ಚಿನ್ನದ ಪಕ್ಷಿಯನ್ನಾಗಿ ಮಾಡಿದ್ದರಂತೆ ಅಂದರೆ ಅವರ ಆಡಳಿತಾವಧಿಯಲ್ಲಿ ಭಾರತದಲ್ಲಿ ಸಾಕಷ್ಟು ಸಂಪತ್ತು ತುಂಬಿರುವ ಕಾರಣ ವಿಕ್ರಮಾದಿತ್ಯ ರಾಜನನ್ನು ಗೋಲ್ಡನ್ ರಾಜ ಎಂದು ಕರೆಯುತ್ತಿದ್ದರಂತೆ. ವಿಕ್ರಮಾದಿತ್ಯನ ಕಾಲದಲ್ಲಿ ಭಾರತ ವಿದೇಶಿ ಬಟ್ಟೆಯನ್ನು ಚಿನ್ನದ ತೂಕದೊಂದಿಗೆ ಖರೀದಿಸಲಾಗುತ್ತಿತ್ತಂತೆ. ಅಂದರೆ ವಿದೇಶಿಗರು ನೀಡುವ ಬಟ್ಟೆಗೆ ಪ್ರತಿಯಾಗಿ ಭಾರತೀಯರು ಬಂಗಾರ ಕೊಟ್ಟು ಖರಿದಿ ಮಾಡುತ್ತಿದ್ದರಂತೆ.

ಅಂದು ಭಾರತದಲ್ಲಿ ಎಷ್ಟೊಂದು ಚಿನ್ನವಿತ್ತು ಎಂದರೆ ವಿಕ್ರಮಾದಿತ್ಯ ರಾಜನ ಆಳ್ವಿಕೆಯ ಅವಧಿಯಲ್ಲಿ ನಾಣ್ಯಗಳು ಸಹ ಚಿನ್ನದ್ದಾಗಿದ್ದವು. ನೋಡಿ ಇದುವರೆಗೂ ನಮಗೆ ವಿಕ್ರಮಾದಿತ್ಯ ರಾಜ ಎಂಬ ಹೆಸರು ಕೇಳಿದಾಕ್ಷಣ ವಿಕ್ರಮಾದಿತ್ಯ ಬೇತಾಳನ ಕಥೆಗಳು ಮಾತ್ರ ನೆನಪಾಗುತ್ತಿದ್ದವು ಆದರೆ ಆ ರಾಜ ಹಿಂದುತ್ವದ ಉಳಿವಿಗಾಗಿ ಮಾಡಿರುವ ಕೆಲಸ ತುಂಬಾ ಜನರಿಗೆ ಗೊತ್ತಿಲ್ಲ. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ ಕೆಳಗಿನ ಕಮೆಂಟ್‌ಗಳಲ್ಲಿ ಹಂಚಿಕೊಳ್ಳಿ.

Trending Short Videos

error: Content is protected !!