ಗ್ರಾಹಕರೆ ಈ ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆಯನ್ನು ಹೊಂದಿದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ, ಹೌದು ಆರ್ಬಿಐ ಈ ಹೊಸ ಆದೇಶವನ್ನು ಹೊರಡಿಸಿದೆ, ಅದೆನೆಂದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕಿನಲ್ಲಿ ಖಾತೆ ಹೊಂದುವದು ಅನಿವಾರ್ಯವಾಗಿದೆ, ಆದರೇ ಹಣವನ್ನು ಖಾತೆಯಲ್ಲಿ ಇಡುವದು ಎಷ್ಟು ಸುರಕ್ಷಿತವೊ ಅಷ್ಟೆ ಹಾನಿಯನುಂಟು ಮಾಡುತ್ತದೆ ಎಂಬುದು ನೆನಪಿರಲಿ. ಈಗ ಆರ್ಬಿಐ ಬ್ಯಾಂಕ್ ಖಾತೆ ಹೊಂದಿದವರಿಗೆ ಕೆಟ್ಟ ಸುದ್ದಿಯನ್ನು ನೀಡಿದೆ.
ಕರೋನಾ ವೈರಸ್ನಿಂದಾಗಿ ಇಂದು ದೇಶವು ಸಂಪೂರ್ಣವಾಗಿ ಲಾಕ್ಡೌನ್ ಆಗಿದೆ. ಈ ಕಾರಣದಿಂದಾಗಿ ದೇಶದ ಆರ್ಥಿಕ ಪರಿಸ್ಧಿತಿಯು ಕುಗ್ಗುತ್ತಿದೆ. ಈ ಎಲ್ಲದರ ಮಧ್ಯೆ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈಯಲ್ಲಿನ ಸಹಕಾರಿ ಬ್ಯಾಂಕುಗಳ ಮೇಲೆ ನಿಷೇಧ ಹೇರಲಾಗಿದ್ದು ಮತ್ತು ಕೆಲವು ಬ್ಯಾಂಕುಗಳಿಗೆ ವಿಧಿಸಿರುವ ನಿಷೇಧವನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸಹಕಾರಿ ಬ್ಯಾಂಕ್, ದಿ ನೀಡ್ಸ್ ಆಫ್ ಲೈಫ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ಗೆ ಅನ್ವಯವಾಗುವ ನಿರ್ಬಂಧಗಳನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿದೆ. ಬ್ಯಾಂಕಿನ ಈ ನಿರ್ಬಂಧಗಳು ಈಗ ಅಕ್ಟೊಬರ್ 31 ರವರೆಗೆ ವಿಸ್ತರಿಸಲಾಗಿದೆ. 2018 ರ ಅಕ್ಟೊಬರ್ನಲ್ಲಿ ರಿಸರ್ವ್ ಬ್ಯಾಂಕ್ ಕೋ ಆಪರೇಟಿವ್ ಬ್ಯಾಂಕ್ಗೆ ಆರು ತಿಂಗಳ ಕಾಲ ನಿಷೇಧ ಹೇರಿತ್ತು. ಬ್ಯಾಂಕ್ಗಳು ಯಾವುದೇ ರೀತಿಯ ಸಾಲವನ್ನು ನೀಡಬಾರದೆಂದು ರಿಸರ್ವ್ ಬ್ಯಾಂಕ್ ಈ ಹಿಂದೆ ಹೇಳಿತ್ತು.
ಬ್ಯಾಂಕ್ ಮ್ಯಾನೆಜರ ಅಥವಾ ಬ್ಯಾಂಕ್ ನ ಯಾವುದೇ ಸಿಬ್ಬಂದಿ ಸಾಲವನ್ನು ತಮ್ಮ ಗ್ರಾಹಕರಿಗೆ ಹೊಸ ರೀತಿಯಲ್ಲಿ ಕೊಡಲು ಸಾಧ್ಯವಿರಲಿಲ್ಲ. ಈ ಎಲ್ಲ ವ್ಯವಹಾರಗಳಿಗೆ ರಿಸರ್ವ್ ಬ್ಯಾಂಕ್ ಕಡಿವಾಣ ಹಾಕಿದೆ. ಇಲ್ಲಿಯವರೆಗೆ ರಿಸರ್ವ್ ಬ್ಯಾಂಕ್ ಈ ರೀತಿಯ ಚಟುವಟಿಕೆಗಳಿಗೆ ಎರಡು ಬಾರಿ ನಿರ್ಭಂಧಗಳನ್ನು ಹೇರಿದ್ದಾರೆ. ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ಗಳಿಗೆ ಈ ಆದೇಶವನ್ನು ಹೊರಡಿಸಿದ್ದು ಅದೆನೆಂದರೆ, 26 ಅಕ್ಟೊಬರ್ 2018 ರಂದು ಹೊರಡಿಸಿದ ಸೂಚನೆಗಳು ಇನ್ನೂ ಆರು ತಿಂಗಳವರೆಗೆ (30 ಏಪ್ರಿಲ್ 2020 ರಿಂದ 31 ಅಕ್ಟೊಬರ್ 2020) ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.
ಮತ್ತೊಂದು ಹೇಳಿಕೆಯಲ್ಲಿ, ಗೋವಾದ ಮಾರ್ಗಾನ್, ಮಡ್ಗಾಂವ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ಗೆ ಅನ್ವಯವಾಗಿರುವ ನಿರ್ಬಂಧಗಳನ್ನು ಆಗಸ್ಟ್ 2ನೇ ತಾರಿಖಿನವರೆಗೆ 3 ತಿಂಗಳುಗಳವರಮಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಬ್ಯಾಂಕಿಗೆ ಅನ್ವಯವಾಗುವ ನಿರ್ಬಂಧಗಳು 2 ಮೇ 2020 ರಂದು ಕೊನೆಗೊಳ್ಳಲ್ಲಿದ್ದವು ಆದರೆ ಈಗಾ ಕೋ ಆಪರೇಟವ್ ಬ್ಯಾಂಕ್ಗಳು ನೀಡುತ್ತಿರುವ ಸಾಲಾವನ್ನು ತಡೆ ಹಿಡಿದು 3 ತಿಂಗಳುಗಳವರೆಗೆ ನಿರ್ಭಂಧವನ್ನು ವಿಸ್ತರಿಸಲಾಗಿದೆ.
ರಿಸರ್ವ್ ಬ್ಯಾಂಕ್ ಇದಕ್ಕೂ ಮೊದಲು ಕೋಲ್ಕತಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಎಂಬ ಕೆಲವು ಬ್ಯಾಂಕುಗಳ ಮೇಲೆ ನಿಷೇಧ ಹೇರಿತ್ತು, ಬ್ಯಾಂಕ್ ಗಳಿಂದ ನಗದು ಹಿಂಪಡೆಯುವಿಕೆ ಮತ್ತು ಇತರ ಚಟುವಟಿಕೆಗಳನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ನಿಬಂಧನೆಗಳು ಜನವರಿ 10, 2020 ರಿಂದ 9 ಜುಲೈ 2020 ರವರೆಗೆ ಜಾರಿಯಲ್ಲಿರುತ್ತವೆ. ಕಳೆದ ವರ್ಷ ಜುಲೈನಲ್ಲಿ, ಕೇಂದ್ರ ಬ್ಯಾಂಕ್ ಸಹಕಾರಿ ಬ್ಯಾಂಕಗಳಿಂದ ಸಾಲ ನೀಡುವುದು ಅಥವಾ ನವೀಕರಿಸುವುದು, ಯಾವುದೇ ರೀತಿಯ ಹೂಡಿಕೆ ಮಾಡುವುದು, ಯಾವುದೇ ಬಿಲ್ ಸಂಗ್ರಹಿಸುವುದು, ಹೊಸ ಠೇವಣಿ ಇಡುವುದು ಅಥವಾ ಆರ್ಬಿಐನ ಲಿಖಿತ ಅನುಮತಿಯಿಲ್ಲದೆ ಯಾವುದೇ ಪಾವತಿ ಮಾಡುವುದನ್ನು ನಿಷೇಧಿಸಲಾಗಿತ್ತು.
ಆರ್ಬಿಐ ಠೇವಣಿದಾರರಿಗೆ 1,000 ರೂ ವರೆಗೆ ಮಾತ್ರ ಹಿಂಪಡೆಯಲು ರಿಸವ್೯ ಬ್ಯಾಂಕ್ ಅವಕಾಶ ನೀಡಿತ್ತು. ಕಳೆದ ತಿಂಗಳು ಆರ್ಬಿಐ ಎಸ್ ಬ್ಯಾಂಕ್ ಮೇಲೆ ನಿಷೇಧ ಹೇರಿತ್ತು. ಈ ರೀತಿಯ ಆದೇಶಗಳನ್ನು ಹೊರಡಿಸಲು ಕಾರಣವೆನೆಂದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೊಡದೆ ಬ್ಯಾಂಕ್ ಗಳಿಗೆ ಮೋಸ ಮಾಡುತ್ತಿರುವುದು ಕಂಡು ಬಂದ ಕಾರಣ ಈ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಕೆಲವು ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತವೆ, ಆದರೆ ಈ ರೀತಿಯ ನಿಲ೯ಕ್ಷತನದಿಂದ ಮುಂದೊಂದು ದಿನ ಬ್ಯಾಂಕ್ ಗಳು ಅಪಾರವಾದ ನಷ್ಟವನ್ನು ಭರಿಸಬೇಕಾದೀತು. ಅದಕ್ಕಾಗಿ ರಿಸರ್ವ್ ಬ್ಯಾಂಕ್ ಇಂದು ಮುಂಬಯಿಯಲ್ಲಿ ಕೆಲವು ಸಹಕಾರಿ ಬ್ಯಾಂಕಿನ ಮೇಲಿನ ನಿರ್ಬಂಧದ ಅವಧಿಯನ್ನು ವಿಸ್ತರಿಸಲಾಗಿದೆ.