fbpx

ಮೋದಿ ಸರ್ಕಾರದ ನಿಯಮವನ್ನು ಧಿ’ಕ್ಕರಿಸಿ ಭಾರೀ ಸಂ’ಕಟಕ್ಕೆ ಸಿಲುಕಿದ ಕೇಜ್ರಿವಾಲ್: ಕಂಗಾಲಾದ ದೆಹಲಿಯ ಜನತೆ

ವಿಶ್ವದ ಪ್ರತಿಯೊಂದು ದೇಶವು ಕೊರೊನಾಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ, ಈ ಮಧ್ಯೆ ವಿಜ್ಞಾನಿಗಳು ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ನಿಒಡುವ ಮೂಲಕ ಕೊರೊನಾ ರೋಗಿಗಳನ್ನು ಕಾಪಾಡುತ್ತಿದ್ದಾರೆ. ಈ ಚಿಕಿತ್ಸೆ ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ಸಹಾಯಕವಾಗಿದೆಯೆಂದು ಹೇಳಲಾಗ್ತಿದೆ. ಆದರೆ ಈಗ ಈ ಚಿಕಿತ್ಸೆಗೆ ಸಂಬಂಧಿಸಿದ ಇಂತಹ ಸುದ್ದಿಗಳು ಮಹಾರಾಷ್ಟ್ರದಿಂದ ಹೊರಬರುತ್ತಿದ್ದು, ಅದರ ಪರಿಣಾಮಕಾರಿತ್ವದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಾಸ್ತವವಾಗಿ, ಭಾರತದಲ್ಲಿ ಪ್ಲಾಸ್ಮಾ ಚಿಕಿತ್ಸೆಯು ಈ ಹಿಂದೆ ಭರವಸೆಯ ಕಿರಣವನ್ನು ತೋರಿಸಿದೆ ಆದರೆ ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ತೆಗೆದುಕೊಂಡ ಮೊದಲ ಕರೋನಾ ಪಾಸಿಟಿವ್ ರೋಗಿ ಮೃ’ತಪಟ್ಟಿದ್ದಾರೆ. ಹೌದು 53 ವರ್ಷದ ರೋಗಿ ಏಪ್ರಿಲ್ 29 ರಂದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಹಲವು ದಿನಗಳಿಂದ ರೋಗಿಯು ವೆಂಟಿಲೇಟರ್‌ನಲ್ಲಿದ್ದರು ಮತ್ತು ನಾಲ್ಕು ದಿನಗಳ ಹಿಂದೆ ಆತನಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿತ್ತು.

ಕರೋನಾದಿಂದ ಚೇತರಿಸಿಕೊಂಡ ಆ ರೋಗಿಗೆ ಪ್ಲಾಸ್ಮಾವನ್ನು ತೆಗೆದುಕೊಂಡು 200 ಎಂಎಲ್ ಡೋಸ್ ನೀಡಲಾಯಿತು ನಂತರ ಆತ ಸಾ’ವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಐಸಿಎಂಆರ್ ಎಚ್ಚರಿಕೆ ಹೊರತಾಗಿಯೂ ಪ್ಲಾಸ್ಮಾ ಚಿಕಿತ್ಸೆಯನ್ನು ಅವಲಂಬಿಸಿ ಚಿಕಿತ್ಸೆ ನೀಡಲು ಅನುಮತಿಸಿದ್ದಾರೆ. ಅವರ ಪ್ರಕಾರ, ಅದರ ಆರಂಭಿಕ ಫಲಿತಾಂಶಗಳು ಉತ್ತಮವಾಗಿದ್ದವು ಹೀಗಾಗಿ ಅದೇ ತಂತ್ರಜ್ಞಾನವನ್ನು ಬಳಸುವುದನ್ನು ಮುಂದುವರಿಸುತ್ತಾರೆ ಮತ್ತು ಅದರ ಕ್ಲಿನಿಕಲ್ ಪ್ರಯೋಗಗಳನ್ನು ನಿಷೇಧಿಸಲಾಗುವುದಿಲ್ಲ ಎಂದಿದ್ದಾರೆ..

ಇದನ್ನೂ ಓದಿ:  ಲವ್‌ಜಿ'ಹಾದ್ ಬಲೆಗೆ ಬಿದ್ದು ಮದುವೆಯಾದ ತಿಂಗಳಲ್ಲೇ ಹಿಂದೂ ಯುವತಿಯ ತಲೆ ಕಡಿದು ಹತ್ಯೆಮಾಡಿದ ಮುಸ್ಲಿಂ ಗಂಡ! ಹತ್ಯೆಗೈಯಲು ಕಾರಣವೇನು ಗೊತ್ತೇ?

ಆದರೆ ಈ ಚಿಕಿತ್ಸೆಗೆ ಸಂಬಂಧಿಸಿದಂತೆ ಈಗಾಗಲೆರ ಐಸಿಎಂಆರ್ ಎಚ್ಚರಿಕೆ ನೀಡಿತ್ತು ಎಂಬುದು ಗಮನಿಸಬೇಕಾದ ಸಂಗತಿ, ಇದರ ಪ್ರಕಾರ ಈ ತಂತ್ರವು ರೋಗಿಗಳ ಮೇಲೆ ಮಾರಕವೆಂದು ಸಾಬೀತಾಗುತ್ತಿದೆ. ಮಹಾರಾಷ್ಟ್ರದಿಂದ ಪ್ಲಾಸ್ಮಾ ಚಿಕಿತ್ಸೆಯ ವಿಫಲತೆಯ ನಂತರ, ದೆಹಲಿ ಮುಖ್ಯಮಂತ್ರಿಗೆ ಈಗ ಮತ್ತೆ ಸಂಕಟದಲ್ಲಿ ಸಿಲುಕಿದ್ದಾರೆ. ಈ ಪ್ಲಾಸ್ಮಾ ತಂತ್ರಜ್ಞಾನದಿಂದ ದೆಹಲಿಯನ್ನು ಪುನರುಜ್ಜೀವನಗೊಳಿಸುವ ಮಾರ್ಗವನ್ನು ಹುಡುಕುತ್ತಿರುವ ದೆಹಲಿ ಸರ್ಕಾರ ಈಗ ಯಾವ ದಿಕ್ಕನ್ನೂ ಕಾಣದೆ ದಂಗಾಗಿದೆ.

ಮತ್ತೊಂದೆಡೆ, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ, ಐಸಿಎಂಆರ್ ಅನುಮೋದನೆಯ ನಂತರ, ಪ್ಲಾಸ್ಮಾ ಚಿಕಿತ್ಸೆಯನ್ನು ಕರೋನಾದಲ್ಲಿ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ ಎಂದು ಹೇಳಲಾಗ್ತಿದೆ. ಆದಾಗ್ಯೂ, ಪ್ಲಾಸ್ಮಾ ಚಿಕಿತ್ಸೆಯಿಂದ ರೋಗಿಯು ಚೇತರಿಸಿಕೊಂಡಿದ್ದಾನೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಮತ್ತು ಅದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ವಿಶೇಷವೆಂದರೆ, ಮಹಾರಾಷ್ಟ್ರದಲ್ಲಿ ಪ್ರತಿದಿನ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಬದಲಾಗಿ ಗುಣ ಹೊಂದಿದ ರೋಗಿಗಳು ಕಡಿಮೆ ಪ್ರಮಾಣದಲ್ಲಿವೆ.

Trending Short Videos

error: Content is protected !!