fbpx

ವಾಟ್ಸಾಪ್‌ನಲ್ಲಿ ಬಂದ ಆ ಒಂದು ಸುಳ್ಳು ಸುದ್ದಿಯಿಂದ ಪ್ರಾಣ ಕಳೆದುಕೊಂಡ 700 ಜನ, 5000 ಜನರ ಸ್ಥಿತಿ ಗಂಭೀರ

ಈ ಲೇಖನದಲ್ಲಿ, ನಾವು ನಿಮಗೆ ಕರೋನಾ ವೈರಸ್ ಬಗ್ಗೆ ಹರಡುತ್ತಿರುವ ಊಹಾಪೋಹಗಳು ಹಾಗೂ ಅವುಗಳಿಂದಾಗುವ ಅನಾಹುತಗಳ ಕುರಿತಾಗಿ ಹೇಳಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಬಗ್ಗೆ ವದಂತಿಗಳು ಬಹಳ ವೇಗವಾಗಿ ಹರಡುತ್ತಿವೆ ಇದರಿಂದಾಗಿ ಅನೇಕರು ಭಯಗೊಂಡಿದ್ದಾರೆ ಹಾಗೂ ಈ ವದಂತಿಗಳಿಗೆ ಕಿವಿಗೊಟ್ಟು ಅನಾಹುತಕ್ಕೆ ಬ’ಲಿಯಾಗುತ್ತಿದ್ದಾರೆ. ಈಗಾಗಲೇ ವಿಶ್ವದಾದ್ಯಂತ 3,126,806 ಜನರು ಸೋಂಕಿಗೆ ಒಳಗಾಗಿದ್ದಾರೆ,

ಈ ಕೊರೊನಾ ಕುರಿತಾದ ಸುಳ್ಳು ಸುದ್ದಿಯೊಂದು ಇರಾನ್‌ನಲ್ಲಿ ಹರಡಿದ್ದು ಇದರಿಂದಾಗಿ ಒಂದು ದೊಡ್ಡ ಅನಾಹುತವಾಗಿದೆ. ಹೌದು ಈಗಾಗಲೇ 92,584 ಜನರು ಇರಾನ್‌ನಲ್ಲಿ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು ಅಲ್ಲಿ 5,877 ಜನರನ್ನು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಇರಾನ್‌ನಲ್ಲಿ ಯಾರೋ ಒಬ್ಬರು ಫಿನಾಯಿಲ್ ಕುಡಿಯುವುದರಿಂದ ಕರೋನಾ ವೈರಸ್ ಸೋಂಕು ಉಂಟಾಗುವುದಿಲ್ಲ ಎಂಬ ವದಂತಿಯನ್ನು ಹಬ್ಬಿಸಿದ್ದಾರಂತೆ.


Continue Reading

ಈ ಸುದ್ದಿ ಹಬ್ಬಿದ್ದೆ ತಡ ಹೆಚ್ಚಿನ ಸಂಖ್ಯೆಯ ಜನರು ಫಿನಾಯಿಲ್ ಸೇವಿಸಿದ್ದಾರೆ. ಈ ಫಿನಾಯಿಲ್‌ನಲ್ಲಿ ಮೆಥನಾಲ್ ಅಂಶ ಇರುವುದರಿಂದ ಅದು ವಿಷಕಾರಿಯಾಗಿರುತ್ತೆ. ಹೀಗಾಗಿ ಒಟ್ಟು 700 ಜನರು ಅದನ್ನು ಸೇವಿಸಿವ ಮೂಲಕ ಸಾ’ವನ್ನಪ್ಪಿದ್ದಾರೆ. ಇರಾನ್‌ನ ಆರೋಗ್ಯ ಸಚಿವಾಲಯದ ಸಲಹೆಗಾರ ಹೊಸೆನ್ ಹಸಾನಿಯನ್ ಅವರು ಈ ವಿಷಕಾರಿ ಫಿನಾಯಿಲ್ ಸೇವಿಸಿರುವ ಕಾರಣ ಸುಮಾರು 200 ಜನರು ಮನೆಯಲ್ಲೆ ಸಾ’ವನ್ನಪ್ಪಿದ್ದಾರೆ, ಇನ್ನೂ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಕಾರಿ ಫಿನಾಯಿಲ್ ಕುಡಿಯುವುದರಿಂದ 525 ಜನರು ಆಸ್ಪತ್ರೆಯಲ್ಲಿ ಸಾ’ವನ್ನಪ್ಪಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ:  ಎರಡು ಮರದ ದಿಣ್ಣೆಗಳ ಮೇಲೆ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಇರಾನ್ ಆರೋಗ್ಯ ಇಲಾಖೆ ಉಲ್ಲೇಖಿಸಿ ಇರಾನ್ ಸ್ಟೇಟ್ ಟಿವಿ, ಒಟ್ಟು 5011 ಜನರು ಫಿನಾಯಿಲ್ ಸೇವಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ. ಇರಾನ್‌ನಲ್ಲಿ ಒಟ್ಟು 40 ಮದ್ಯದ ಕಾರ್ಖಾನೆಗಳು ಇದ್ದವು, ಆದರೆ ಇದೀಗ ಆ ಕಾರ್ಖಾನೆಗಳಲ್ಲಿ ಸ್ಯಾನಿಟೈಜರ್‌ಗಳನ್ನು ಮಾತ್ರ ತಯಾರಿಸಲಾಗುತ್ತಿದೆ, ಕೊರೊನಾ ವೈರಸ್ ಪರಿಚಯವಾದಾಗ ಜನರು ಮುಖವಾಡ ಧರಿಸಲು ಪ್ರಾರಂಭಿಸಿದರು ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಸಹ ಪಾಲಿಸುತ್ತಿದ್ದರು.

ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳನ್ನು ಕೇಳಿ ಅದಕ್ಕೆ ಬ’ಲಿಯಾಗಿದ್ದಾರೆ. ಇರಾನ್‌ನಲ್ಲಿ ಕೆಲವು ಧಾರ್ಮಿಕ ಕಾರ್ಯಗಳನ್ನು ಸಹ ಇರಿಸಲಾಗಿತ್ತು, ಈ ಕಾರಣದಿಂದಾಗಿ ಕರೋನಾದ ಸಂಖ್ಯೆ ಏಕಾಏಕಿ ಹೆಚ್ಚಾಯಿತು ಎನ್ನಲಾಗಿದೆ. ಇದೀಗ ಇರಾನ್‌ನಲ್ಲಿ ಸಾಮಾಜಿಕ ಜಾಲತಾಣದ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು ಯಾರಾದರೂ ಸುಳ್ಳು ವದಂತಿ ಹಬ್ಬಿಸಿದರೇ ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ.

Trending Short Videos

This will close in 26 seconds

error: Content is protected !!