ವೀಡಿಯೋ ಸುದ್ದಿಯ ಕೊನೆಯಲ್ಲಿದೆ
ಕರೋನಾ ಹರಡುವ ಭೀತಿಯಿಂದ ಮಾರ್ಚ್ ಮೊದಲ ವಾರದಲ್ಲಿಯೇ ದೇಶದಾದ್ಯಂತ ಬಹುತೇಕ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಿಸಲಾಗಿದೆ. ಅಲ್ಲದೆ ಮಕ್ಕಳ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ. ಇನ್ನೂ ಹತ್ತನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳ ಪರೀಕ್ಷೆಯ ದಿನಾಂಕವನ್ನೂ ಖಚಿತಪಡಿಸಿಲ್ಲ.
ಮಕ್ಕಳನ್ನು ಸೇರಿಸಿಕೊಂಡು ಯಾವುದೇ ರೀತಿಯಲ್ಲಿ ತರಗತಿಗಳು ನಡೆಸಬಾರದು, ಟ್ಯೂಷನ್ ಕ್ಲಾಸ್ ಹೆಸರಲ್ಲಿ ಮಕ್ಕಳನ್ನು ಕಳುಹಿಸಬಾರದು ಎಂಬ ಸುತ್ತೋಲೆಯನ್ನೂ ಸರ್ಕಾರ ಹೊರಡಿಸಿದೆ. ಆದರೆ ಕೆಲ ಕಡೆಗಳಲ್ಲಿ ಇದನ್ನು ಉಲ್ಲಂಘಿಸಿ ಮಕ್ಕಳಿಗೆ ಟ್ಯೂಷನ್ ತರಗತಿಗಳು ನಡೆಯುತ್ತಿದೆ.
ಇದೇ ರೀತಿ ಆದೇಶ ಉಲ್ಲಂಘಿಸಿ ಪುಟ್ಟ ಮಗುವನ್ನು ಟ್ಯೂಷನ್ ಕ್ಲಾಸ್ ಗೆ ಕಳುಹಿಸಿದ ದಂಪತಿಗೆ ಪೋಲೀಸರು ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನನ್ನು ಒತ್ತಾಯದಿಂದ ಟ್ಯೂಷನ್ ಗೆ ಕಳುಹಿಸುತ್ತಿದ್ದಾರೆ ಎಂದು ಪುಟ್ಟ ಮಗು ಪೋಲೀಸರಿಗೆ ಮಾಹಿತಿ ನೀಡಿ ಮನೆಗೆ ಕರೆದುಕೊಂಡು ಬಂದಿದೆ.
ಮನೆಗೆ ಬಂದ ಪೋಲೀಸರು ಮಗುವಿನ ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಮಗು ಕೂಡ ಪೋಲೀಸರಿಗೆ ಸಾಥ್ ನೀಡಿದೆ. ಕೆಲ ದಿನಗಳ ಹಿಂದೆ ಇನ್ನೊಂದು ಪುಟ್ಟ ಮಗು ತನ್ನ ಟ್ಯೂಷನ್ ಕ್ಲಾಸ್ ಗೆ ಪೋಲೀಸರನ್ನು ಕರೆದುಕೊಂಡು ಹೋಗಿ ಸುದ್ದಿಯಾಗಿತ್ತು, ಇದೀಗ ಈ ಮಗು ತನ್ನ ಹೆತ್ತವರನ್ನೇ ಪೋಲೀಸರಿಗೆ ಹಿಡಿದುಕೊಟ್ಟಿದೆ. ವೀಡಿಯೋ ನೋಡಿ,
Watch Video
