fbpx

Fact Check| ಸಾಧುಗಳ ಹಂತಕರನ್ನು ಎನ್ಕೌಂಟರ್ ಮಾಡಿದ್ರ ಉತ್ತರಪ್ರದೇಶ ಪೋಲೀಸರು? ಇಲ್ಲಿದೆ ಡಿಟೈಲ್ಸ್

ವೀಡಿಯೋ ಸುದ್ದಿಯ ಕೊನೆಯಲ್ಲಿದೆ

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಇಬ್ಬರು ಸಾಧುಗಳು ಸೇರಿ ಮೂವರನ್ನು ನೂರಕ್ಕೂ ಹೆಚ್ಚು ಜನರ ಗುಂಪು ಕಲ್ಲು, ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿತ್ತು. ಇದರ ಆಕ್ರೋಶ ಇನ್ನೇನು ತಣ್ಣಗಾಗಬೇಕು ಅನ್ನೋ ಹೊತ್ತಿಗೆ ಉತ್ತರಪ್ರದೇಶದಲ್ಲಿ ಮತ್ತೆ ಇಬ್ಬರು ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇದೀಗ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಗಳು ವೈರಲ್ ಆಗುತ್ತಿದೆ. ಉತ್ತರಪ್ರದೇಶದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿದ ಮೂವರು ಮ’ತಾಂಧರನ್ನು ಪೋಲೀಸರು ಎನ್ಕೌಂಟರ್ ಮಾಡಿದ್ದಾರೆ ಎಂದು ಹೇಳಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ.

PicsArt 04 30 02.19.31

ಆದರೆ ಈ ಬಗ್ಗೆ ಫಾಕ್ಟ್ ಚೆಕ್ ಮಾಡಿದಾಗ ಇದೊಂದು ಸುಳ್ಳುಸುದ್ದಿ ಎಂದು ಬಯಲಾಗಿದೆ. 2018ರಲ್ಲಿ ಉತ್ತರ ಪ್ರದೇಶದಲ್ಲಿ ಮೂವರು ಸಾಧುಗಳನ್ನು ಹತ್ಯೆ ಮಾಡಿದ್ದ ಗುಂಪಿನಲ್ಲಿ ಇಬ್ಬರನ್ನು ಪೋಲೀಸರು ಎನ್ಕೌಂಟರ್ ಮಾಡಿ ಹೊಡೆದುರುಳಿಸಿದ್ದರು. ಇದೇ ಸುದ್ದಿಯನ್ನು ಇತ್ತೀಚೆಗೆ ನಡೆದ ಘಟನೆಯೊಂದಿಗೆ ಜೋಡಿಸಿ ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

2018 ರಲ್ಲಿ ಅಸ್ಘರ್ ಅಲಿ, ನೌಷದ್, ಮುಷ್ತಕೀಮ್ ಹಾಗೂ ಅಫ್ಸರ್ ಎಂಬ ನಾಲ್ವರ ಗುಂಪು ಉತ್ತರಪ್ರದೇಶದಲ್ಲಿ ಮೂವರು ಸಾಧುಗಳನ್ನು ಹತ್ಯೆಗೈದಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೋಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೋಲೀಸ್ ಎನ್ಕೌಂಟರ್ ಗೆ ಇಬ್ಬರು ಆರೋಪಿಗಳು ಬಲಿಯಾಗಿದ್ದರು.ಈಗ ಉತ್ತರಪ್ರದೇಶದಲ್ಲಿ ನಡೆದಿರುವ ಇಬ್ಬರು ಸಾಧುಗಳ ಹತ್ಯೆ ಪೂರ್ವ ಧ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದು ಆರೋಪಿಯನ್ನು ಸ್ಥಳೀಯರೆ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಢ್ರಗ್ಸ್ ನಶೆಯಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿದ್ದ. ಇದೇ ಸಾಧುಗಳು ಆರೋಪಿಯನ್ನು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರಿಗೆ ಹಿಡಿದುಕೊಟ್ಟಿದ್ದರು. ಈ ಹಗೆ ತೀರಿಸಿಕೊಳ್ಳಲು ಆರೋಪಿ ಸಾಧುಗಳನ್ನು ಹತ್ಯೆಗೈದಿದ್ದಾನೆ.

2018ರಲ್ಲಿ ಸಾಧುಗಳ ಹಂತಕರ ವಿರುದ್ಧ ಉತ್ತರಪ್ರದೇಶದಲ್ಲಿ ನಡೆದ ಎನ್ಕೌಂಟರ್ ನ ವೀಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!