ಉತ್ತರಪ್ರದೇಶದ ಬುಲಂದರ್ ಶಹರ್ ನಲ್ಲಿ ಸೋಮವಾರ ರಾತ್ರಿ ಇಬ್ಬರು ಸಾಧುಗಳನ್ನು ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಳ್ಳ ತನದ ಆರೋಪ ಹೊತ್ತಿದ್ದ ವ್ಯಕ್ತಿ ಗಾಂಜಾ ನಶೆಯಲ್ಲಿ ಇಬ್ಬರು ಸಾಧುಗಳನ್ನು ಹತ್ಯೆಗೈದಿದ್ದು 55ವರ್ಷ ಹಾಗೂ 35ವರ್ಷ ವಯಸ್ಸಿನ ಇಬ್ಬರು ಸಾಧುಗಳು ಮೃತಪಟ್ಟಿದ್ದಾರೆ.
ಕೆಲ ಸಮಯಗಳ ಹಿಂದೆ ಆರೋಪಿಯ ಮೇಲೆ ಸಾಧುಗಳು ಕಳ್ಳತನದ ಆರೋಪ ಹೊರಿಸಿದ್ದರು. ಇದರಿಂದ ಸಾಧುಗಳ ವಿರುದ್ಧ ರೊಚ್ಚಿಗೆದ್ದಿದ್ದ ಆರೋಪಿ ಹತ್ಯೆಗೆ ಸಂಚು ರೂಪಿಸಿದ್ದ. ಸೋಮವಾರ ರಾತ್ರಿ ಗಾಂಜಾ ನಶೆಯಲ್ಲಿ ಹರಿತವಾದ ಆಯುಧದಿಂದ ಸಾಧುಗಳ ಮೇಲೆರಗಿ ಹತ್ಯೆಗೈದಿದ್ದಾನೆ.
ಹತ್ಯೆಯ ನಂತರ ಆರೋಪಿ ಗಾಂಜಾ ನಶೆಯಲ್ಲಿಯೇ ಸುಮಾರು 2ಕಿಮೀ ದೂರ ಹೋಗಿದ್ದಾನೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು, ಚೆನ್ನಾಗಿ ಬೆಂಡೆತ್ತಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಪೋಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ವೀಡಿಯೋ ನೋಡಿ,
Watch Video
